

ಮೂಡಲಗಿ: ಪಟ್ಟಣದ ಕುರುಹಿನಶೆಟ್ಟಿ ಅರ್ಬನ್ ಕೋ&ಆಪ್ ಕ್ರೆಡಿಟ್ ಸೊಸೈಟಿಗೆ ಮುಂಬರುವ ಐದು ವರ್ಷಗಳ ಅವಧಿಗೆ ಶನಿವಾರ ಜರುಗಿದ ಚುನಾವಣೆಯಲ್ಲಿ ಆಡಳಿತಾರೂಢ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಸೊಸೈಟಿಯ 13 ನಿರ್ದೇಶಕರಲ್ಲಿ ಆರು ಜನರು ಅವಿರೋಧ ಆಯ್ಕೆಯಾಗಿದ್ದಾರೆ. 1468 ಮತದಾರರಲ್ಲಿ 1275 ಜನರು ಮತ ಚಲಾಯಿಸಿದರು. ಚುನಾವಣೆ ಪ್ರಕ್ರಿಯೆಯಲ್ಲಿ ಸಾಮಾನ್ಯ ಮತೇತ್ರದಿಂದ ಬಸಪ್ಪ ಮುಗಳಖೋಡ, ಗೋಡಚೆಪ್ಪ ಮುರಗೋಡ, ಸುಭಾಸ ಬೆಳಕೂಡ, ಲಕ್ಕಪ್ಪ ಪೂಜೇರಿ, ಬಸವರಾಜ ಬೆಳಕೂಡ, ವಿಶಾಲ ಶೀಲವಂತ, ಮಾಲಾ ಬೆಳಕೂಡ ಆಯ್ಕೆಯಾದರು. ಅವಿರೋಧ ಆಯ್ಕೆ: ಹಿಂದುಳಿದ ಅ ವರ್ಗದಿಂದ ಇಸ್ಮಾಯಿಲ್ ಕಳ್ಳಿಮನಿ, ಬ ವರ್ಗದಿಂದ ಶಾಂತವ್ವ ಬೋರಗಲ, ಮಹಿಳಾ ೇತ್ರದಿಂದ ಉಮಾ ಬೆಳಕೂಡ, ರುಕ್ಮವ್ವ ಪೂಜೇರಿ, ಪರಿಶಿಷ್ಟ ಜಾತಿಯಿಂದ ಶಾಲನ್ ಕೊಡತೆ, ಪಂಗಡದಿಂದ ರಾಮಪ್ಪ ಬಳೆಗಾರ ಆಯ್ಕೆಯಾದರು.