ಹೂವಿನಹಡಗಲಿಯಲ್ಲಿ ತಂಪೆರೆದ ಮಳೆ

12 HDLP 02
ಹೂವಿನಹಡಗಲಿಯಲ್ಲಿ ಸುರಿಯುತ್ತಿರುವ ಮಳೆಯಲ್ಲಿ ಬೈಕ್‌ಗಳು ಓಡಾಡುತ್ತಿರುವುದು.
Published on

ಹೂವಿನಹಡಗಲಿ: ತಾಲೂಕಿನ ವಿವಿಧ ಭಾಗಗಳಲ್ಲಿ ಶನಿವಾರ ಸುರಿದ ಮಳೆ ಬಿಸಿಲಿನ ಬೇಗೆಯಿಂದ ಬಳಲಿದ ಜನರಿಗೆ ತಪ್ಪಿನ ವಾತಾವರಣ ಮುದನೀಡಿತು. ಬಿರುಗಾಳಿಗೆ ರಸ್ತೆ ಅಕ್ಕ-ಪಕ್ಕ ಹಾಕಿದ್ದ ಬ್ಯಾನರ್‌ಗಳು ತುಂಡಾಗಿ ಬಿದ್ದವು.

ಮಧ್ಯಾಹ್ನ 4 ಗಂಟೆಯಿಂದ ಆರಂಭವಾದ ಮಳೆ 5 ಗಂಟೆಯವರೆಗೂ ಸುರಿಯಿತು. ಇನ್ನು ದೊಡ್ಡ ಕಾಲುವೆಗಳಲ್ಲಿ ಮಳೆ ನೀರುತುಂಬಿಕೊಂಡು ಹರಿಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಮಳೆ ಸುರಿಯುತ್ತಿದಂತೆ ಸಾರ್ವಜನಿಕರು ಮಳೆಯಿಂದ ರಕ್ಷಿಸಿಕೊಳ್ಳಲು ರಸ್ತೆ ಬದಿಯ ಅಂಗಡಿಗಳ ಕಡೆಗೆ ಓಡಿದರು. ಇನ್ನು ರಸ್ತೆ ಬದಿಯಲ್ಲಿ ಮಾರಾಟ ಮಾಡಲು ತಂದಿದ್ದ ವಸ್ತುಗಳನ್ನು ರಕ್ಷಿಸಿಕೊಳ್ಳಲು ತಾಡಪಾಲ್‌ಗಳನ್ನು ಹಾಕಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net