

ಸಂಡೂರು: ಕೃಷ್ಣಾನಗರದ ಆಂಜನೇಯ ಸ್ವಾಮಿ ದೇವಸ್ಥಾನವನ್ನು 25 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಗ್ರಾಮಸ್ಥರ ಬಹುದಿನಗಳ ಬೇಡಿಕೆಯನ್ನು ಈ ಮೂಲಕ ಈಡೇರಿಸಲಾಗುತ್ತಿದೆ ಎಂದು ಶಾಸಕಿ ಅನ್ನಪೂರ್ಣಾ ತುಕಾರಾಮ್ ಹೇಳಿದರು.
ಕೃಷ್ಣಾನಗರ ಗ್ರಾಮದಲ್ಲಿ ಶ್ರೀ ಆಂಜನೇಯ ದೇವಸ್ಥಾನದ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಸೋಮವಾರ ಮಾತನಾಡಿದರು. ಬಹುಗ್ರಾಮ ಕುಡಿವ ನೀರಿನ ಯೋಜನೆ ಕಾಮಗಾರಿ ಅಂತಿಮ ಹಂತದಲ್ಲಿದೆ. ಸಾರ್ವಜನಿಕ ಉಪಯೋಗಕ್ಕೆ ಓಪನ್ ಏರ್ ಜಿಮ್ ನಿರ್ಮಿಸಲಾಗಿದೆ. ಗ್ರಾಮದಿಂದ ಹೊಸಪೇಟೆ ಬೈಪಾಸ್ ಸಂಪರ್ಕಿಸುವ ರಸ್ತೆ, ಪ್ರಾಥಮಿಕ ಶಾಲೆಯ ಕಟ್ಟಡ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ಪ್ರಮುಖರಾದ ವಿರೂಪಾಕ್ಷಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಣದಾರ್ ಸುಭಾನ್ ಸಾಬ್, ಸದಸ್ಯ ತೊರಸಾಲಿ ಮಲ್ಲಿಕಾರ್ಜುನ, ಮುಖಂಡರಾದ ಪೋತಲಿಂಗಪ್ಪ, ನೀಲಪ್ಪ, ರುದ್ರಪ್ಪ, ಜಿಲಾನ್ ಸಾಬ್, ನಾಣಿಕೇರಿ ಬಾಬು, ಅಕ್ಬರ್ ಸಾಬ್, ದೇವೇಂದ್ರಪ್ಪ, ಹನುಮಂತಪ್ಪ, ಚಂದ್ರಶೇಖರ್, ತಿಮ್ಮಪ್ಪ ಇತರರಿದ್ದರು.