

ಸಿಂಧನೂರು: ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮನಸ್ಸು ಮತ್ತು ದೇಹ ಸದೃಢವಾಗಿರುತ್ತದೆ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.
ತುರ್ವಿಹಾಳ ಪಟ್ಟಣದ ವಿರಾಟ ಸಿಸಿ ಗೆಳೆಯ ಬಳಗ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಆಯೋಜಿಸಿದ್ದ ಸ್ಟೂಡೆಂಟ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಕ್ರೀಡಾಪಟುಗಳು ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಂಡು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಬೇಕು. ಪಠ್ಯೇತರ ಚಟುವಟಿಕೆ ಜತೆಗೆ ವಿದ್ಯಾಭ್ಯಾಸದ ಕಡೆಯೂ ಗಮನಹರಿಸಬೇಕು ಎಂದರು. ಪಪಂ ಅಧ್ಯಕ್ಷ ಕೆ.ಶಾಮೀದ್‌ಸಾಬ್ ಚೌದ್ರಿ, ವಿಎಸ್‌ಎಸ್‌ಎನ್ ಅಧ್ಯಕ್ಷ ನಿಂಗಪ್ಪ ಗೋಸಬಾಳ, ಪಪಂ ನಾಮನಿರ್ದೇಶಿತ ಸದಸ್ಯ ಸಿರಾಜ್ ಪಾಷಾ, ಫಕೀರಪ್ಪ ಭಂಗಿ, ಅರವಿಂದ ರೆಡ್ಡಿ, ಶಾಮೀದ್ ಅಲಿ, ಯುನುಸ್ ಖಾಜಿ, ಶಿವಶಂಕರ ಲಿಂಗಪ್ಪ ಸಾಹುಕಾರ, ಭೀಮದಾಸ ದಾಸರ್, ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಖಾದರ್ ಬಾಷಾ ಇತರರಿದ್ದರು.