

ಶಿಗ್ಗಾಂವಿ: ಜಮೀನುವೊಂದರಲ್ಲಿ ನಿಲ್ಲಿಸಿದ್ದ ಕುರಿ ಹಿಂಡಿನಿಂದ 2.50 ಲಕ್ಷ ರೂ. ಮೌಲ್ಯದ 15 ಕುರಿ ಹಾಗೂ 2 ಟಗರುಗಳನ್ನು ಕಳ್ಳತನ ಮಾಡಿದ ಘಟನೆ ತಾಲೂಕಿನ ಹೊಸನೀರಲಗಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಕಲಘಟಗಿ ತಾಲೂಕಿನ ಬೀರವಳ್ಳಿ ಗ್ರಾಮದ ಮಲ್ಲಿಕಾರ್ಜುನ ಅಣ್ಣಪ್ಪ ಲೌಟೆ (38) ಎಂಬುವರ ಕುರಿಗಳು ಕಳ್ಳತನವಾಗಿರುವುದು.
ಇವರು ಕುರಿಗಳನ್ನು ಮೇಯಿಸಿಕೊಂಡು ಬಂದು ಹೊಸನೀರಲಗಿ ಬಳಿ ಜಮೀನುವೊಂದರಲ್ಲಿ ನಿಲ್ಲಿಸಿದ್ದರು. ಈ ಸಮಯದಲ್ಲಿ ಯಾರೋ ಖದೀಮರು 15 ಕುರಿ ಮತ್ತು 2 ಟಗರುಗಳನ್ನು ದೋಚಿದ್ದಾರೆ ಎನ್ನಲಾಗಿದೆ. ಈ ಕುರಿತು ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.