

ಹಾವೇರಿ: ಜಮೀನಿನಲ್ಲಿ ನೀರು ಹಾಯಿಸುತ್ತಿದ್ದ ಸಮಯದಲ್ಲಿ ರೈತರೊಬ್ಬರು ವಿದ್ಯುತ್ ತಗುಲಿ ಮೃತಪಟ್ಟ ಘಟನೆ ತಾಲೂಕಿನ ದೇವಿಹೊಸೂರ ಗ್ರಾಮದಲ್ಲಿ ಗುರುವಾರ ನಡೆದಿದೆ.
ಲೋಹಿತ್ ತಿರಕಪ್ಪ ಓಬಣ್ಣನವರ (48) ಮೃತ ರೈತ.
ಇವರು ಮೆಕ್ಕೆಜೋಳ ಜಮೀನಿನಲ್ಲಿ ನೀರು ಹಾಯಿಸುತ್ತಿದ್ದ ಸಮಯದಲ್ಲಿ ವಿದ್ಯುತ್ ಕಂಬದ ಹತ್ತಿರ ನಿಂತಾಗ ವಿದ್ಯುತ್ ನೆಲಕ್ಕೆ ಗ್ರೌಂಡ್ ಆಗಿದ್ದು ಇದರಿಂದ ಶಾಕ್ ಹೊಡೆದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.