

ಬೆಂಗಳೂರು: ಕೆಲಸದ ದಿನಗಳಲ್ಲಿ ಸಂಜೆ ೪ ರಿಂದ ೬ ಗಂಟೆವರೆಗೂ ಇನ್‌ಾಂಟ್ರಿ ರಸ್ತೆಯಲ್ಲಿರುವ ಪೊಲೀಸ್ ಆಯುಕ್ತ ಕಚೇರಿಯಲ್ಲಿ ನನ್ನನು ಸಾರ್ವಜನಿಕರು ಭೇಟಿ ಮಾಡಬಹುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಟ್ವೀಟ್ ಮಾಡಿದ್ದಾರೆ.
ಟ್ವಿಟ್ಟರ್‌ನಲ್ಲಿ ವ್ಯಕ್ತಿಯೊಬ್ಬರು ನಿಮ್ಮನ್ನು ಭೇಟಿಯಾಗುವುದೇಗೆ ಎಂದು ಪ್ರಶ್ನಿಸಿದ್ದು, ಇದಕ್ಕೆ ಉತ್ತರಿಸಿದ ನಗರ ಪೊಲೀಸ್ ಆಯುಕ್ತರು ಸಂಜೆ ೪ ರಿಂದ ೬ ಗಂಟೆವರೆಗೂ ಸಾರ್ವಜನಿಕರು ಭೇಟಿ ಮಾಡಬಹುದು ಎಂದು ತಿಳಿಸಿದ್ದಾರೆ.