ಹಿರಿಯರಲ್ಲೇ ದೇವರ ಕಾಣಬೇಕು

web2
ಯರಗಟ್ಟಿ ಮಹಾಂತ ದುರದುಂಡೀಶ್ವರ ಮಠದಲ್ಲಿ ಅಕ್ಕನ ಬಳಗದಿಂದ ಶನಿವಾರ ಹಮ್ಮಿಕೊಂಡಿದ್ದ ಗುಡ್ಡಾಪುರ ದಾನಮ್ಮದೇವಿ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದಲ್ಲಿ ನ್ಯಾಯಾಧೀಶೆ ಸವಿತಾ ಪಟ್ಟಣಶೆಟ್ಟಿ ಮಾತನಾಡಿದರು. ಎ.ಎಂ. ಹಾದಿಮನಿ, ರಾಜಶೇಖರ ಬಿರಾದರ, ಉಮಾದೇವಿ ಪೂರ್ವಿಮಠ ಇತರರು ಇದ್ದರು.
Published on

ಯರಗಟ್ಟಿ: ದೇವರಿಗಾಗಿ ಅಲೆದಾಡುವ ಬದಲು ಹಿರಿಯರಲ್ಲಿ ದೇವರನ್ನು ಕಾಣಬೇಕು. ಅಲ್ಲದೆ ಅವರನ್ನು ಪ್ರೀತಿಯಿಂದ ಜೋಪಾನ ಮಾಡಬೇಕು ಎಂದು ಶಿವಮೊಗ್ಗ ನ್ಯಾಯಾಲಯದ ನ್ಯಾಯಾಧೀಶೆ ಸವಿತಾ ಪಟ್ಟಣಶೆಟ್ಟಿ ಹೇಳಿದರು.

ಇಲ್ಲಿನ ಮಹಾಂತ ದುರದುಂಡೀಶ್ವರ ಮಠದಲ್ಲಿ ಅಕ್ಕನ ಬಳಗದಿಂದ ಶನಿವಾರ ಹಮ್ಮಿಕೊಂಡಿದ್ದ ಗುಡ್ಡಾಪುರ ದಾನಮ್ಮದೇವಿ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದಲ್ಲಿ ಮಾತನಾಡಿ, ಕುಟುಂಬದ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯದ ಕಾರಣ ನ್ಯಾಯಾಲಯದಲ್ಲಿ ಕೌಟುಂಬಿಕ ವ್ಯಾಜ್ಯಗಳು ಬರುತ್ತಿವೆ. ಎಲ್ಲರೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸುಖಿ ಜೀವನ ನಡೆಸಬೇಕು ಎಂದರು. ಎ.ಎಂ. ಹಾದಿಮನಿ ಮಾತನಾಡಿ, ಅಕ್ಕನ ಬಳಗದ ಸದಸ್ಯೆಯರು ಒಳ್ಳೊಳ್ಳೆ ಕಾರ್ಯಕ್ರಮ ಹಮ್ಮಿಕೊಂಡು ಆಧ್ಯಾತ್ಮಿಕ ಪರಿಸರ ನಿರ್ಮಿಸುತ್ತಿದ್ದಾರೆ ಎಂದರು.

ಉಪನ್ಯಾಸಕ ರಾಜಶೇಖರ ಬಿರಾದಾರ ಮಾತನಾಡಿದರು. ಅಕ್ಕನ ಬಳಗದ ಅಧ್ಯಕ್ಷೆ ಮಹಾದೇವಿ ಪೂರ್ವಿಮಠ, ಸುಮಂಗಲಾ ಬಾಳಿ, ಪ್ರಭಾವತಿ ವಾಲಿ, ರತ್ನಾ ಕತ್ತಿಶೆಟ್ಟಿ, ಉಮಾ ಗಾಣಗಿ, ಶಿಲ್ಪಾ ಹಾದಿಮನಿ, ಶಿವಲೀಲಾ ದುಗ್ಗಾಣಿ, ಪೂರ್ಣಿಮಾ ಕತ್ತಿಶೆಟ್ಟಿ, ಆಶಾ ಪರೀಟ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net