ದೇಶದಲ್ಲಿ ಶಾಂತಿ ನೆಲೆಸಲು ಮೌನಅನುಷ್ಠಾನ

22 MANVI 01
ಮಾನ್ವಿ ಐತಿಹಾಸಿಕ ಶ್ರೀಶೈಲ ಭ್ರಮರಾಂಬ, ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಮೂರ್ತಿಗೆ ವಿಶೇಷವಾಗಿ ಹೂವಿನ ಅಲಂಕಾರ ಮಾಡಲಾಗಿತ್ತು.
Published on

ಮಾನ್ವಿ: ಸ್ಥಳೀಯ ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಸ್ವಾಮೀಜಿ 11 ದಿನಗಳ ಮೌನ ಅನುಷ್ಠಾನದ ಮಂಗಲ ಕಾರ್ಯಕ್ರಮ ಅಂಗವಾಗಿ ಶ್ರೀಗಳು ಶ್ರೀಶೈಲ ಭ್ರಮರಾಂಬ, ಮಲ್ಲಿಕಾರ್ಜುನ ಸ್ವಾಮಿಗೆ ವಿಶೇಷ ಅಭಿಷೇಕ ಹಾಗೂ ಪೂಜೆ ಸಲ್ಲಿಸಿದರು.

ನಂತರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿ, ನಾಡಿನಲ್ಲಿ ಉತ್ತಮ ಮಳೆಯಾಗಿ ಸಮೃದ್ಧಿಯಾದ ಬೆಳೆಯನ್ನು ರೈತರು ಬೆಳೆಯುವಂತಾಗಲಿ. ನಾಡಿನ ಜನರು ಸುಖ, ಶಾಂತಿ, ನೆಮ್ಮದಿಯಿಂದ ಬಾಳಲಿ. ದೇಶದಲ್ಲಿ ಶಾಂತಿ ನೆಲೆಸುವಂತಾಗಲಿ ಎನ್ನುವ ಉದ್ದೇಶದಿಂದ ಐತಿಹಾಸಿಕ ಬೆಟ್ಟದ ಶ್ರೀ ಶ್ರೀಶೈಲ ಭ್ರಮರಾಂಬ, ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ 11ದಿನಗಳ ಮೌನಅನುಷ್ಠಾನ ಕೈಗೊಳ್ಳಲಾಗಿತ್ತು.

ಹಿರಿಯರು ಶ್ರೀಶೈಲಕ್ಕೆ ಹೋಗಲು ಅಗಾದೆ ಇರುವವರಿಗೆ ಪಟ್ಟಣದಲ್ಲಿಯೇ ಮಲ್ಲಯ್ಯನ ದರ್ಶನವಾಗಲಿ ಎನ್ನುವ ಉದ್ದೇಶದಿಂದ ಬೆಟ್ಟದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಹಾಗೂ ಭ್ರಮಾರಂಭ ದೇವಿಯ ಪ್ರತಿರೂಪದಂತೆ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಭಕ್ತರ ಸಹಕಾರದಿಂದ ಮುಂದಿನ ದಿನಗಳಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕೈಗೊಳ್ಳಲಾಗುವುದು ಎಂದರು.

ನಿಲೋಗಲ್ ಮಠದ ಡಾ.ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ, ಚೀಕಲಪರ್ವಿ ರುದ್ರಮುನೀಶ್ವರ ಮಠದ ಸದಾಶಿವ ಸ್ವಾಮೀಜಿ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಹರಿಹರ ಪಾಟೀಲ್ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net