ಮೇಖಳಿಯಲ್ಲಿ ವಿದ್ಯುತ್ ಅವಘಡ, ಪರಿಹಾರಕ್ಕೆ ಮನವಿ

030102
Published on

ಮೇಖಳಿ: ಸ್ಥಳೀಯ ಮಣಿಕಂಠ ಫೋಟೋ, ಕಂಪ್ಯೂಟರ್ ಹಾಗೂ ಝೆರಾಕ್ಸ್ ಅಂಗಡಿಗೆ ಭಾನುವಾರ ವಿದ್ಯುತ್ ತಗುಲಿದ್ದು, ಅಂಗಡಿಯಲ್ಲಿದ್ದ ಸುಮಾರು 5 ಲಕ್ಷ ರೂ. ಮೌಲ್ಯದ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ.

ವಿದ್ಯುತ್ ಅವಘಡದ ಬಗ್ಗೆ ರಾತ್ರಿ ಕೆಇಬಿ ಸಿಬ್ಬಂದಿಗೆ ಕರೆ ಮಾಡಿದರೂ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸಿದ್ದಾರೆ ಎಂದು ಮಾಲೀಕ ಲಗಮಣ್ಣ ನಾಯಿಕ ಆರೋಪಿಸಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಚಂದ್ರಕಾಂತ, ಕೆಇಬಿ ಎಇಇ ನಾಗರಾಜ ಯಳ್ಳೂರ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಉಭಯ ಅಧಿಕಾರಿಗಳು ಅಗತ್ಯ ಕ್ರಮದ ಭರವಸೆ ನೀಡಿದ್ದಾರೆ.

ಸಂಜು ವಡೇರ, ಶ್ರೀಧರ ಖಿಚಡೆ, ವಿಠ್ಠಲ ಪೂಜೇರಿ, ಮುರಸಿದ್ದ ನಾಯಿಕ, ಮಹಾದೇವ ಭಜಂತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net