ನಗರದಲ್ಲಿ ಮೂರು ದಿನ ನಾಟಕೋತ್ಸವ

13Anand12
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ರಂಗಸಂಪದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ನಾಟಕೋತ್ಸವದ ಪ್ರಚಾರ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಡಾ.ಅರವಿಂದ ಕುಲಕರ್ಣಿ, ಗುರುನಾಥ ಕುಲಕರ್ಣಿ, ರಾಮಚಂದ್ರ ಕಟ್ಟಿ, ಪ್ರಸಾದ ಕಾರಜೋಳ, ಚಿದಾನಂದ ವಾಳಕೆ ಇತರರಿದ್ದರು.
Published on

ಬೆಳಗಾವಿ: ರಂಗ ಸಂಪದವು ನ.16, 17 ಮತ್ತು 18ರಂದು ನಗರದ ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗ ಮಂದಿರದಲ್ಲಿ ರಂಗ ಕಾರ್ತಿಕೋತ್ಸವ ಎಂಬ ಶೀರ್ಷಿಕೆಯಡಿ ಮೂರು ದಿನಗಳ ಕಾಲ ನಾಟಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಂಗ ಸಂಪದ ಅಧ್ಯಕ್ಷ ಡಾ.ಅರವಿಂದ ಕುಲಕರ್ಣಿ ತಿಳಿಸಿದ್ದಾರೆ.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನ.16ರಂದು ಸಂಜೆ 5.30ಕ್ಕೆ ಧಾರವಾಡದ ಶಾಂತಕವಿ ಸಕ್ಕರಿ ಬಾಳಾಚಾರ್ಯ ಟ್ರಸ್ಟ್ ಅವರಿಂದ ಆಧುನಿಕ ರಂಗ ದಿನಾಚರಣೆ ಆಚರಿಸಲಿದ್ದು, ಸಾಹಿತಿ ಡಾ.ಬಸವರಾಜ ಜಗಜಂಪಿ ರಂಗಭೂಮಿ ಅಂದು ಇಂದು ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಂಜೆ 6.30ಕ್ಕೆ ರಾಜೇಂದ್ರ ಕಾರಂತ ರಚನೆಯ ಡಾ.ಅರವಿಂದ ಕುಲಕರ್ಣಿ ನಿರ್ದೇಶನದ ‘ನಾಯಿ ಕಳೆದಿದೆ‘ ಎಂಬ ನಗೆ ನಾಟಕ ಪ್ರದರ್ಶನವಾಗಲಿದೆ. ನ.17ರಂದು ಸಂಜೆ 6.30ಕ್ಕೆ ಭವಭೂತಿ ರಚನೆಯ ನೀನಾಸಂ ತಿರುಗಾಟ ತಂಡದ ‘ಮಾಲತಿ ಮಾಧವ‘ ನಾಟಕ, ನ.18ರಂದು ಸಂಜೆ 6.30ಕ್ಕೆ ನೀನಾಸಂ ತಿರುಗಾಟ ತಂಡದ 2ನೇ ನಾಟಕ ‘ಅಂಕದ ಪರದೆ‘ ಪ್ರದರ್ಶನಗೊಳ್ಳಲಿದೆ ಎಂದು ಮಾಹಿತಿ ನೀಡಿದರು. ಗುರುನಾಥ ಕುಲಕರ್ಣಿ, ರಾಮಚಂದ್ರ ಕಟ್ಟಿ, ಪ್ರಸಾದ ಕಾರಜೋಳ, ಚಿದಾನಂದ ವಾಳಕೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net