ಬೆಳಗಾವಿಯಲ್ಲಿ ಜಿಟಿಜಿಟಿ ಮಳೆ

mansoon rain
Published on

ಬೆಳಗಾವಿ: ನಗರದಲ್ಲೂ ಶನಿವಾರ ವರುಣನ ಅಬ್ಬರ ತಗ್ಗಿದ್ದು, ಆಗಾಗ ಜಿಟಿಜಿಟಿ ಮಳೆ ಸುರಿಯಿತು. ಕಳೆದ ನಾಲ್ಕೈದು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಕರೊನಾ ವೈರಸ್ ಆತಂಕದ ಮಧ್ಯೆ ವರುಣನ ಆರ್ಭಟ ಸ್ಥಳೀಯರಿಗೆ ಆತಂಕ ತಂದಿತ್ತು. ಆದರೆ, ಮಳೆ ಕಡಿಮೆಯಾಗಿದ್ದರಿಂದ ಜನರು ತುಸು ನಿಟ್ಟುಸಿರು ಬಿಟ್ಟಿದ್ದಾರೆ. ಬೆಳಗಾವಿಯಲ್ಲಿ ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣವಿತ್ತು. ಬಹುತೇಕ ಮುಖ್ಯ ರಸ್ತೆಗಳಲ್ಲಿ ಸಂಚಾರ ಅಧಿಕವಾಗಿತ್ತು.

ಹಿರೇಬಾಗೇವಾಡಿ ವರದಿ: ಬೆಳಗಾವಿ ತಾಲೂಕಿನ ಬೆಂಡಿಗೇರಿಯಲ್ಲಿ ಶನಿವಾರ ಕೆರೆ ಒಡೆದಿದ್ದು, ನೂರಾರು ಎಕರೆಯಲ್ಲಿ ಬೆಳೆದಿದ್ದ ಕೃಷಿಭೂಮಿಗೆ ನೀರು ನುಗ್ಗಿದೆ. ಬೆಳೆಹಾನಿ ಆದವರಿಗೆ ಸೂಕ್ತ ಪರಿಹಾರ ನೀಡುವುದಾಗಿ ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕೆರೆ ಒಡೆದಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net