ನಗರದಲ್ಲಿ ದೇವಪ್ರಭಸಾಗರ ಮಹಾರಾಜರಿಂದ ಸಲ್ಲೇಖನ ಸಮಾಧಿ ಮರಣ

010101
Published on

ಬೆಳಗಾವಿ: ನಗರದ ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ್‌ನಲ್ಲಿ ಆಚಾರ್ಯ ಶ್ರೀ ವರ್ಧಮಾನಸಾಗರ ಮಹಾರಾಜರ ಸಂಘದ ಚಾರ್ತುಮಾಸ್ಯ ಕಾರ್ಯಕ್ರಮ ನಡೆಯುತ್ತಿದೆ. ಈ ಸಂಘದಲ್ಲಿನ ತಪಸ್ವಿ ಶ್ರೀ ದೇವಪ್ರಭಸಾಗರ ಮಹಾರಾಜರು ಬುಧವಾರ ಸಲ್ಲೇಖನ ಸಮಾಧಿ ಮರಣ ಹೊಂದಿದರು.

ರಾಜಸ್ಥಾನ ರಾಜ್ಯದ ಉದಯಪುರ ಬಳಿ ಇರುವ ಬಾಠೇಡಾ ಗ್ರಾಮದಲ್ಲಿ 1932ರಲ್ಲಿ ಜನಿಸಿದ್ದ ಅವರು, ಲೋಕೋಪಯೋಗಿ ಇಲಾಖೆ ಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. 2007ರಲ್ಲಿ ಕ್ಷುಲ್ಲಕ ದೀಕ್ಷೆ , 2010ರಲ್ಲಿ ಮುನಿ ದೀಕ್ಷೆ ಸ್ವೀಕರಿಸಿದ್ದರು. 12 ವರ್ಷಗಳ ಹಿಂದೆ ನಿಯಮ ಸಲ್ಲೇಖನ ವ್ರತ ಆರಂಭಿಸಿದ್ದರು. ನಿಯಮ ಸಲ್ಲೇಖನ ವ್ರತದ ಅವಧಿ ಮುಗಿದ ಕಾರಣ, 9 ದಿನಗಳ ಹಿಂದೆ ತಮ್ಮ ಗುರುಗಳ ಆಜ್ಞೆಯಂತೆ ಯಮಸಲ್ಲೇಖನ ವ್ರತ ಸ್ವೀಕರಿಸಿದ್ದರು.

ಅವರ ಅಂತ್ಯಸಂಸ್ಕಾರದಲ್ಲಿ ಜೈನ ಸಮಾಜದ ಬಾಂಧವರು ಪಾಲ್ಗೊಂಡಿದ್ದರು. ಕಳೆದ ಎರಡು ತಿಂಗಳ ಅವಧಿಯಲ್ಲಿ ಮೂವರು ಮುನಿಗಳು ಸಲ್ಲೇಖನ ಸಮಾಧಿ ಮರಣ, ಓರ್ವ ಮಾತಾಜಿ ಸಮಾಧಿ ಮರಣ ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net