ಜಾತಿ ಕಾಲಂನಲ್ಲಿ ಮಾದಿಗ ಎಂದು ಬರೆಸಿ

maski pc
ದೊಡ್ಡಪ್ಪ ಮುರಾರಿ
Published on

ಮಸ್ಕಿ: ಒಳಮೀಸಲಾತಿ ಸಮೀಕ್ಷೆ ಆರಂಭವಾಗಿದ್ದು, ಗಣತಿ ಸಿಬ್ಬಂದಿ ಮನೆಗೆ ಬಂದಾಗ ಮಾದಿಗರು ಜಾತಿ ಕಾಲಂನಲ್ಲಿ ಮಾದಿಗ ಎಂದು ಬರೆಸುವಂತೆ ಜಿಪಂ ಮಾಜಿ ಸದಸ್ಯ ದೊಡ್ಡಪ್ಪ ಮುರಾರಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದರು. ಸಾಹಿತಿ ಸಿ.ದಾನಪ್ಪ ಮಾತನಾಡಿ, ಮೇ 9ರಂದು ಮೀಸಲಾತಿ ಹೋರಾಟ ಸಮಿತಿ ಜಾಗೃತಿ ಜಾಥಾ ಮಸ್ಕಿಗೆ ಆಗಮಿಸಲಿದ್ದು, ಕೆಂಚಮ್ಮನ ಗುಡಿ ಮುಂಭಾಗದಲ್ಲಿ ಮತ್ತು ಹಳೇ ಬಸ್ ನಿಲ್ದಾಣದ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಬಳಿ ಬಹಿರಂಗ ಸಭೆ ಆಯೋಜಿಸಲಾಗಿದೆ ಎಂದರು. ಪುರಸಭೆ ಸದಸ್ಯ ದೊಡ್ಡ ಕರಿಯಪ್ಪ, ದುರ್ಗಾಪ್ರಸಾದ ತೋರಣದಿನ್ನಿ, ಪ್ರಶಾಂತ ನಿಲೋಗಲ್ ಇದ್ದರು.

ಛಲವಾದಿ ಬಲಗೈ ಎಂದು ಬರೆಸಿ: ಸಮುದಾಯ ಛಲವಾದಿ ಬಲಗೈ ಎಂದು ಬರೆಸುವಂತೆ ತಾಲೂಕು ಛಲವಾದಿ ಸಮಾಜದ ಅಧ್ಯಕ್ಷ ಬಾಲರಾಜ್ ವಿರುಪಾಪುರ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದರು.

ಛಲವಾದಿ ಸಮಾಜದವರು ಜಾತಿ ಕಾಲಂನಲ್ಲಿ ಛಲವಾದಿ ಎಂದು ಉಪಜಾತಿ ಕಾಲಂನಲ್ಲಿ ಬಲಗೈ ಪಂಗಡ ಎಂದು ಬರೆಸಿ. ಈ ಕುರಿತು ರಾಜ್ಯ ಸಮಿತಿ ಮತ್ತು ಜಿಲ್ಲಾ ಸಮಿತಿ ಸೂಚನೆ ಇದ್ದು, ಪ್ರತಿಯೊಬ್ಬರೂ ಪಾಲಿಸಿ ಎಂದರು. ಪ್ರಧಾನ ಕಾರ್ಯದರ್ಶಿ ಯಂಕಪ್ಪ ಬಸಾಪುರ, ಗೌರವ ಅಧ್ಯಕ್ಷ ಹುಚ್ಚಪ್ಪ ಬಸಾಪುರ, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಬಳಗಾನೂರು, ಪ್ರಮುಖರಾದ ರಮೇಶ ಕೊಲಮಿ, ದುರುಗಪ್ಪ ಬಸ್ಸಾಪುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net