

ಕಾನಹೊಸಹಳ್ಳಿ: ಬಸ್‌ನಲ್ಲಿ ಹೆರಿಗೆ ನೋವು ಕಾಣಿಕೊಂಡ ಮಹಿಳೆಯನ್ನು ಚಾಲಕ, ನಿರ್ವಾಹಕ ಆಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕೊಪ್ಪಳ ಜಿಲ್ಲೆ ಕಾರಟಗಿಯ ಸುಲ್ತಾನ್‌ಬೀ ಎಂಬುವರು ಬೆಂಗಳೂರಿನಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿರುವ ಪತಿಯನ್ನು ನೋಡಿಕೊಂಡು ಹುನಗುಂದ ಡಿಪೋದ ಬಸ್‌ನಲ್ಲಿ ಒಬ್ಬರೇ ವಾಪಸಾಗುವಾಗ ದೊಣ್ಣೆಹಳ್ಳಿ ಬಳಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಅವರ ಪಕ್ಕದಲ್ಲಿದ್ದ ನಾಗವೇಣಿ ಎನ್ನುವರು ಗಮನಿಸಿ ಆಲೂರು ಪಿಎಚ್‌ಸಿ ನರ್ಸ್ ಶಿಲ್ಪಾಗೆ ಕರೆ ಮಾಡಿ ತಿಳಿಸಿದ್ದಾರೆ.
ಹೆದ್ದಾರಿ ಗಸ್ತು ಪೊಲೀಸರ ನೆರವಿನೊಂದಿಗೆ ಬಸ್ ಚಾಲಕ ನಾಗರಾಜ್ ವರಕ್ಲಹಳ್ಳಿ, ನಿರ್ವಾಹಕ ಜಿ.ಇಳಕಲ್ ಎಂಬುವರು ಆಲೂರು ಸರ್ಕಾರಿ ಆಸ್ಪತ್ರೆ ಕರೆತಂದು ಸೇರಿಸಿದ್ದಾರೆ. ನರ್ಸ್‌ಗಳಾದ ಶಿಲ್ಪಾ, ಶಶಿಕಲಾ ಅವರು ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ. ಹೆಣ್ಣು ಮಗು ಜನನವಾಗಿದ್ದು ಇಬ್ಬರೂ ಕ್ಷೇಮವಾಗಿದ್ದಾರೆ ಎಂದು ವೈದ್ಯಾಧಿಕಾರಿ ಚಿರಂಜೀವಿ ತಿಳಿಸಿದ್ದಾರೆ. ಸಾರಿಗೆ ಸಿಬ್ಬಂದಿ ಹಾಗೂ ಪ್ರಯಾಣಿಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.