

ಬೆಳಗಾವಿ: ಖಾಸಗಿ ಬಸ್‌ನಲ್ಲಿ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಖಾನಾಪುರ ತಾಲೂಕಿನ ಕಣಕುಂಬಿ ಬಳಿ ಪೊಲೀಸರು ಸೋಮವಾರ ಬಂಧಿಸಿದ್ದು, ಅವರ ಬಳಿಯಿದ್ದ 684 ಮದ್ಯದ ಬಾಟಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರನ್ನು ಆಂಧ್ರಪ್ರದೇಶ ಮೂಲದ ದಿಲೀಪಕುಮಾರ ಹಾಗೂ ಗುಂಡಪ್ಪ ನೇನೆ ಎಂದು ಗುರುತಿಸಲಾಗಿದೆ. ಬೆಳಗಾವಿ ಉಪ ವಿಭಾಗ ಹಾಗೂ ತನಿಖಾ ಠಾಣೆಯ ಅಧಿಕಾರಿಗಳು ಬಸ್ ನಿಲ್ಲಿಸಿ, ಪರಿಶೀಲಿಸಿದಾಗ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ.
ಅಬಕಾರಿ ನಿರೀಕ್ಷಕ ಮಂಜುನಾಥ ಗಲಗಲಿ ಹಾಗೂ ಸಿಬ್ಬಂದಿ ಎಸ್.ಎಂ.ಪೂಜಾರ, ಬಿ.ಎ. ಪಾಂಗೇರಿ, ಸುನೀಲ ಪಾಟೀಲ, ಎಂ.ಎಫ್. ಕಟಗೆಣ್ಣವರ, ಬಿ.ಎಸ್. ಅಟಿಗಲ್, ಎ.ಐ.ಸಯ್ಯದ್ ಇತರರು ಕಾರ್ಯಾಚರಣೆ ನಡೆಸಿದ್ದರು.