ಅರಟಾಳದಲ್ಲಿ ಸೊಳ್ಳೆಗಳು ಹರಡದಂತೆ ಫಾಗಿಂಗ್

01
Published on

ಅರಟಾಳ: ಗ್ರಾಮದಲ್ಲಿ ಸೊಳ್ಳೆಗಳು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಫಾಗಿಂಗ್ ಯಂತ್ರದ ಮೂಲಕ ಔಷಧ ಸಿಂಪಡಿಸುವ ವ್ಯವಸ್ಥೆ ಮಾಡಲಾಗಿದೆ. ಮಾರಕ ಕರೊನಾ ದೇಶದ ಜನರ ನಿದ್ದೆಗೆಡಿಸಿದೆ. ಸಾರ್ವಜನಿಕರು ಎಚ್ಚರ ವಹಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಪಿಡಿಒ ಎ.ಜಿ. ಎಡಕೆ ಹೇಳಿದ್ದಾರೆ.

ಶನಿವಾರ ಗ್ರಾಮದಲ್ಲಿ ಗ್ರಾಪಂ ವತಿಯಿಂದ ಔಷಧ ಸಿಂಪಡಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಕರೊನಾ ಬಗ್ಗೆ ಜನರು ಆತಂಕಪಡುವ ಬದಲಾಗಿ, ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಪ್ರತಿಯೊಬ್ಬರೂ ಸ್ವಚ್ಛತೆಗೆ ಒತ್ತು ನೀಡಬೇಕು. ಜಾತ್ರೆ, ಸಂತೆ ರದ್ದು ಮಾಡಲಾಗಿದೆ. ಸಹಕಾರ ನೀಡಬೇಕು ಎಂದರು.

ಕಾರ್ಯದರ್ಶಿ ಜೀತೇಂದ್ರ ಗದಾಡೆ, ಗ್ರಾಪಂ ಸದಸ್ಯರಾದ ಹನುಮಂತ ಪೂಜಾರಿ, ಮಾಳಪ್ಪ ಕಾಂಬಳೆ, ಗ್ರಾಪಂ ಮಾಜಿ ಸದಸ್ಯ ನಾರಾಯಣ ಸಾಳುಂಕೆ, ಎಂ.ಪಿ. ಪಾಟೀಲ, ಆಶಾ ಕಾರ್ಯಕರ್ತೆಯರಾದ ವಿಜಯಲಕ್ಷ್ಮೀ ಕಾಂಬಳೆ, ದ್ರಾಕ್ಷಾಯಣಿ ಕಾಂಬಳೆ, ಕವಿತಾ ಕಾಂಬಳೆ, ಕುಮಾರ ಮಾದರ, ಕಾಸಪ್ಪ ಮಾದರ, ಮಹಾದೇವ ಮಾದರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net