ಅಪಘಾತದಲ್ಲಿ 13 ಕುರಿಗಳ ಸಾವು

21 TVG 02
ತಾವರಗೇರಾ ಸಮೀಪದ ಕುಷ್ಟಗಿ ರಸ್ತೆಯಲ್ಲಿ ಲಾರಿ ಹಾಯ್ದು ಕುರಿಗಳು ಸತ್ತಿರುವುದು.
Published on

ತಾವರಗೇರಾ: ಸ್ಥಳೀಯ ಕುಷ್ಟಗಿ ರಸ್ತೆಯಲ್ಲಿ ಲಾರಿ ಹಾಯ್ದು 13 ಕುರಿಗಳು ಸ್ಥಳದಲ್ಲೇ ಸತ್ತ ಘಟನೆ ಗುರುವಾರ ನಡೆದಿದೆ.

ಕೊಟ್ಟಿಗೆ ಗೊಬ್ಬರ ತುಂಬಿಕೊಂಡು ತಾವರಗೇರಾ ಕಡೆಗೆ ಹೋಗುತ್ತದ್ದ ಲಾರಿ, ಬಸ್ ಹಿಂದಿಕ್ಕುವ ಸಂದರ್ಭದಲ್ಲಿ ಕುರಿ ಹಿಂಡು ಅಡ್ಡ ಬಂದಿದ್ದರಿಂದ ಅವಘಡ ಸಂಭವಿಸಿದೆ.

13 ಕುರಿಗಳು ಸತ್ತು, 12 ಕುರಿಗಳು ಗಾಯಗೊಂಡಿವೆ. ಕುರಿಗಳು ಮಸ್ಕಿ ತಾಲೂಕಿನ ರತ್ನಾಪೂರ ಹಟ್ಟಿಯ ವೆಂಕಣ್ಣ ಸೂಜಿ, ನರಹರಿಯಪ್ಪ ಸೂಜಿ, ಮುದುಕಪ್ಪ ಹಳೇಪೇಟೆ ಅವರಿಗೆ ಸೇರಿದವಾಗಿವೆ. ಲಾರಿ ಚಾಲಕ ಅಮರೇಶ ಟಕ್ಕಳಕಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳೀಯ ಠಾಣೆ ಸಿಬ್ಬಂದಿ ಬಸವರಾಜ ಇಂಗಳದಾಳ, ವೀರೇಶ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net