ತಲೇಖಾನದಲ್ಲಿ ಎರಡು ಕರಡಿ ಪ್ರತ್ಯಕ್ಷ

Published on

ಮುದಗಲ್: ಸಮೀಪದ ತಲೇಖಾನ ಗ್ರಾಮದಲ್ಲಿ ಕಳೆದ 3-4 ದಿನಗಳಿಂದ 2 ಕರಡಿಗಳ ಒಡಾಟ ಕಂಡುಬಂದಿದ್ದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಶುಕ್ರವಾರ ಬೆಳಗ್ಗೆ ಎರಡು ಕರಡಿಗಳು ಕಾಣಿಸಿಕೊಂಡಿದ್ದನ್ನು ಗಮನಿಸಿದ ಗ್ರಾಮಸ್ಥರು, ಶನಿವಾರ ಮಧ್ಯಾಹ್ನ ಗುಡ್ಡದ ಬಳಿ ಕುರಿಗಾಹಿಗಳಿಗೆ ಕಾಣಿಸಿಕೊಂಡಿದ್ದರಿಂದ ಊರ ಜನರಿಗೆ ವಿಷಯ ತಿಳಿಸಿದ್ದಾರೆ.

ಗ್ರಾಮಸ್ಥರು ಹುಡುಕಾಟ ನಡೆಸುವಷ್ಟರಲ್ಲಿ ಕರಡಿಗಳು ಪಲಾಯನ ಮಾಡಿವೆ.

ಭೇಟಿ: ತಲೇಖಾನ್ ಗ್ರಾಪಂ ನೀಡಿದ ಮಾಹಿತಿ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿ ಹುಸೇನ ಬಾಷಾ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮಾತನಾಡಿ ಕರಡಿಗಳ ಚಲನವಲನ ರಾತ್ರಿ ಇರುತ್ತದೆ.

ಈ ಹಿಂದೆ ಪಿಕಳಿಹಾಳ, ಯರದೊಡ್ಡಿ, ಭೋಗಾಪುರದಲ್ಲಿದ್ದವು. ಈಗ ತಲೇಖಾನಗೆ ಬಂದಿವೆ. ಸಾರ್ವಜನಿಕರು ರಾತ್ರಿ ವೇಳೆಯಲ್ಲಿ ಎಚ್ಚರಿಕೆಯಿಂದ ಇರಬೇಕು. ಗ್ರಾಮದ ಹೊರವಲಯದ ದೇವಸ್ಥಾನ, ಗದ್ದುಗೆಗಳಿಗೆ ಏಣ್ಣಿಯ ದೀಪ ಹಚ್ಚಬಾರದು. ಟೆಂಗಿನ ಕಾಯಿ - ಎಣ್ಣೆ ಅವುಗಳಿಗೆ ಆಹಾರವಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net