ತಾಂಡಾಗಳಲ್ಲಿ ಸೀತ್ಲಾ ಹಬ್ಬ ಸಂಭ್ರಮ

hospet seetla habba
ಹೊಸಪೇಟೆಯಲ್ಲಿ ಬಂಜಾರ ಸಮುದಾಯದಿಂದ ಸೀತ್ಲಾ ಹಬ್ಬ ಆಚರಿಸಲಾಯಿತು.
Published on

ಹೊಸಪೇಟೆ: ಮಣ್ಣೆತ್ತಿನ ಅಮಾವಾಸ್ಯೆಯ ಮೊದಲ ಮಂಗಳವಾರ ತಾಲೂಕು ಸೇರಿ ಜಿಲ್ಲೆಯ ವಿವಿಧ ತಾಂಡಾಗಳಲ್ಲಿ ಬಂಜಾರ ಸಮುದಾಯದಿಂದ ಸೀತ್ಲಾ ಹಬ್ಬ ಸಂಭ್ರಮದಿಂದ ಆಚರಿಸಲಾಯಿತು.

ರೋಗ-ರುಜಿನಗಳು ದೂರಾಗಲಿ, ಧನ-ಧಾನ್ಯ ಸಮೃದ್ಧಿಯಾಗಿ ಬೆಳೆದು ಸುಖ, ಶಾಂತಿ ಸಿಗಲಿ ಎಂದು ಪ್ರಾರ್ಥಿಸಿ ತುಳಜಾ ಭವಾನಿ, ಇಂಗಳ ಭವಾನಿ, ಮರಿಯಾ ಭವಾನಿ, ಮತ್ರೋಡಿ ಭವಾನಿ, ದೋಳಂಗಲ್ ಭವಾನಿ ಹಾಗೂ ಕೀಲಕಂಟಕ ಭವಾನಿ ಎಂಬ ದೇವತೆಗಳನ್ನು ಊರ ಹೊರಗೆ ಪ್ರತಿಷ್ಠಾಪಿಸಿ ಪೂಜೆ ಸಲಿಸಲಾಯಿತು.

ಕೆಲವೆಡೆ ಊರ ಹೊರಗಿನ ಬೇವಿನಮರದ ಬುಡದಲ್ಲಿ ಏಳು ಮಾತೆಯರನ್ನು ಪ್ರತಿಬಿಂಬಿಸುವ ಮರದ ಏಳು ಕೊಂಬೆಯ ತುಂಡುಗಳು, ಮತ್ತೊಂದೆಡೆ ಏಳು ಕಲ್ಲುಗಳಿಗೆ ಊರಮಂಜ ಬಣ್ಣ ಲೇಪಿಸಿ, ಕುಂಕುಮಾರ್ಚನೆ ಮಾಡಲಾಯಿತು.

ಮಾತೆಯರ ಪ್ರತಿಬಿಂಬದ ಹಿಂದೆ ಲೂಕಡ್ (ಸೇವಕ) ನನ್ನು ಪ್ರತಿಷ್ಠಾಪಿಸಿ ಬಳಿಕ, ಕುರಿ-ಕೋಳಿ ಹರಕೆ ಹೊತ್ತ ಭಕ್ತರು ರಕ್ತಾಭಿಷೇಕ ಹಾಗೂ ಮಾತೆಯರಿಗೆ ಸಿಹಿ ಭೋಜನದ ಎಡೆ ಇಟ್ಟು ಪೂಜೆ ಸಲ್ಲಿಸುವ ಮೂಲಕ ಸೀತ್ಲಾ ಹಬ್ಬ ಆಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net