

ಹುಕ್ಕೇರಿ: ಸ್ಥಳೀಯ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಭಾನುವಾರ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ ಜರುಗಿತು.
ತಹಸೀಲ್ದಾರ್ ಬಲರಾಮ ಕಟ್ಟಿಮನಿ ಮತ್ತು ತಾಪಂ ಇಒ ಟಿ.ಆರ್.ಮಲ್ಲಾಡದ ಮಗುವಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು. ತಾಲೂಕು ವೈದ್ಯಾಧಿಕಾರಿ ಉದಯ ಕುಡಚಿ ಮಾತನಾಡಿ, ತಾಲೂಕಿನಲ್ಲಿ 5 ವರ್ಷದೊಳಗಿನ 43,786 ಮಕ್ಕಳಿದ್ದು ಲಸಿಕೆ ನೀಡುವ ನಿಟ್ಟಿನಲ್ಲಿ 202 ಬೂತ್ ರಚಿಸಿ, 45 ಮೇಲ್ವಿಚಾರಕರ ನೇತೃತ್ವದಲ್ಲಿ ಕಾರ್ಯತತ್ಪರರಾಗಿದ್ದೇವೆ.
ಅದರಲ್ಲಿ 3 ಶುಗರ್ ್ಯಾಕ್ಟರಿ ಸೇರಿ 49 ಹೈ ರಿಸ್ಕ್ ಏರಿಯಾ ಗುರುತಿಸಲಾಗಿದೆ ಎಂದರು. ಮುಖ್ಯ ವೈದ್ಯಾಧಿಕಾರಿ ಎಂ.ಎಂ.ನರಸನ್ನವರ, ಅರ್ಚನಾ ಕುಲಕರ್ಣಿ, ದೀಪಕ ಅಂಬಲಿ, ಬಿಇಒ ಪ್ರಭಾವತಿ ಪಾಟೀಲ, ಕ್ಷೇತ್ರ ಆರೋಗ್ಯಾಧಿಕಾರಿ ನವೀನ ಬಾಯನಾಯ್ಕ, ಮಹಾದೇವಿ ಜಕಮತಿ, ಉದಯ ಹಜಾರೆ, ಮಂಜುನಾಥ ಬೆಟಗೇರಿ, ಸಂತೋಷ ಕಟಗೇರಿ, ಶ್ರೀದೇವಿ ಶಿರೆಪ್ಪನವರ, ಸೋಮೇಶ ಅರಿಬೆಂಚಿ ಇತರರಿದ್ದರು.