

ಹಂದಿಗುಂದ: ಕ್ರೀಡೆಯಲ್ಲಿ ಸೋಲು -ಗೆಲುವು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯ ಎಂದು ನಿವೃತ್ತ ಮುಖ್ಯಗುರು ಚಂದ್ರಯ್ಯ ಹಿರೇಮಠ ಹೇಳಿದರು.
ಗ್ರಾಮದ ದಿ.ಮಲಗೌಡ ನಾಯಿಕ (ಪಾಟೀಲ) ಸರ್ಕಾರಿ ಪ್ರೌಢಶಾಲೆಯಲ್ಲಿ 2024- 25ನೇ ಸಾಲಿನ ಹಂದಿಗುಂದ ಹಾಗೂ ಪಾಲಬಾವಿ ಕೇಂದ್ರಮಟ್ಟದ ಕ್ರೀಡಾಕೂಟಕ್ಕೆ ಈಚೆಗೆ ಚಾಲನೆ ನೀಡಿ ಮಾತನಾಡಿದರು.
ಭೂದಾನಿ ತಾತಾಸಾಬಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಸಂಗಪ್ಪ ತುಪ್ಪದ, ಹುಲಿಯಪ್ಪ ತೇಗೂರ, ಸಾಗರ ಕುರಬೆಟ್ಟಿ, ಅಸ್ಲಾಂ ಬಿರಾದಾರ, ಮುಖ್ಯೋಪಾಧ್ಯಾಯ ಎ.ಜಿ.ಬಾದಾಮಿ, ಸಿಆರ್‌ಪಿಗಳಾದ ಆರ್.ಎಂ.ತೇಲಿ, ಆರ್.ಆರ್. ಬೀಸನಕೊಪ್ಪ, ಮುಖ್ಯಗುರು ಎಸ್.ಕೆ.ಬಡಿಗೇರ, ಎಂ.ಬಿ.ಬಡಿಗೇರ, ಸದಾಶಿವ ಪಟ್ಟಣಶೆಟ್ಟಿ, ಐ.ಟಿ.ಗಸ್ತಿ, ಮಹಾಂತೇಶ ಹಿರೇಮಠ, ಎಸ್.ಎಂ.ಚೂರಿ, ಗೀತಾ ಸುತಾರ, ಬಿ.ಎಸ್.ಅಂದಾನಿ, ಅಶೋಕ ಗಸ್ತಿ, ಎಸ್.ಎನ್.ಬುರ್ಲಟ್ಟಿ, ಎಂ.ಕೆ.ಸಂಗಾನಟ್ಟಿ, ಸಿ.ಎಸ್.ಹಿರೇಮಠ ಇತರರು ಇದ್ದರು.