ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಲಿ

6 kdl 01
ಕೂಡ್ಲಿಗಿ ಶ್ರೀಮತಿ ಅಂಗಡಿ ವೀರಮ್ಮ, ತಿರುಕಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಬುಧವಾರ ಹಮ್ಮಿಕೊಂಡಿದ್ದ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಗುಡ್ಡಗಾಡು ಓಟಕ್ಕೆ ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪ ನಾಯಕ ಚಾಲನೆ ನೀಡಿದರು. ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಜಿ.ಗುರು ಬಸವರಾಜ ಇತರರಿದ್ದರು.
Published on

ಕೂಡ್ಲಿಗಿ: ಕ್ರೀಡಾಕೂಟಗಳು ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗವಾಗಿವೆ ಎಂದು ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪ ನಾಯಕ ಹೇಳಿದರು.

ಪಟ್ಟಣದ ಶ್ರೀಮತಿ ಅಂಗಡಿ ವೀರಮ್ಮತಿರುಕಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಬುಧವಾರ ಹಮ್ಮಿಕೊಂಡಿದ್ದ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಗುಡ್ಡಗಾಡು ಓಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಇತ್ತೀಚಿನ ವಷರ್ಗಳಲ್ಲಿ ಕ್ರೀಡೆಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ. ಒಲಿಂಪಿಕ್ಸ್, ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಕೂಡಾ ಭಾರತೀಯರು ಪದಕಗಳನ್ನು ಪಡೆಯುತ್ತಿದ್ದಾರೆ. ಸಿನಿಮಾ ತಾರೆಯರನ್ನು ಹೊರತುಪಡಿಸಿದರೆ ಕ್ರೀಡಾಪಟುಗಳಿಗೆ ಹೆಚ್ಚಿನ ಅಭಿಮಾನಿಗಳು ಇರುತ್ತಾರೆ. ಆದ್ದರಿಂದ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡುವ ಮೂಲಕ ಕಾಲೇಜಿನ ಜತೆಗೆ ನಿಮ್ಮ ತಂದೆ, ತಾಯಿಗೂ ಉತ್ತಮ ಹೆಸರು ತರಬೇಕು ಎಂದರು.

ಕಾಲೇಜು ಮುಖ್ಯದ್ವಾರದಿಂದ ಆರಂಭವಾದ ಓಟ ಅಮರ ದೇವರಗುಡ್ಡ, ಗೊಲ್ಲರಹಟ್ಟಿ, ಕೂಡ್ಲಿಗಿ ದೊಡ್ಡ ಕೆರೆ ಹಾದು ಕಾಲೇಜಿಗೆ ಬಂದು ತಲುಪಿತು. ವಿವಿಧ ಕಾಲೇಜುಗಳ 70 ವಿದ್ಯಾರ್ಥಿಗಳು, 22 ವಿದ್ಯಾರ್ಥಿನಿಯರು ಭಾಗಿಯಾಗಿದ್ದರು. ಬಾಲಕರ ವಿಭಾಗದಲ್ಲಿ ಬಳ್ಳಾರಿಯ ಎಸ್ ಎಸ್ ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಬಾಲಕಿಯರ ವಿಭಾಗದಲ್ಲಿ ಎಸ್ ಜಿ ಆರ್ ಸಿ ಎಂಸಿ ಕಾಲೇಜು ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆದುಕೊಂಡರು.

ಪ್ರಾಚಾರ್ಯ ಷಣ್ಮುಖನಗೌಡ, ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಜಿ. ಗುರುಬಸವರಾಜ, ಉಪನ್ಯಾಸಕರಾದ ಬಿ. ಅನಿಲ ಕುಮಾರ, ಏಕಾಂತಪ್ಪ, ಪ್ರಶಾಂತ, ನಿಂಗಪ್ಪ ಕಮತಿ, ಪಿ. ಕಾವ್ಯಾ, ಜ್ಯೋತಿ, ಮುತ್ತೇಗೌಡ್ರು, ಕೆ. ರೀಟಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net