ನಾವಾಡುವ ಮಾತಿನಲ್ಲಿ ಸತ್ವ ಇರಲಿ

9 KUDLAGI 02
ಕೂಡ್ಲಿಗಿ ಹಿರೇಮಠ ವಿದ್ಯಾಪೀಠ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮಕ್ಕೆ ಪ್ರಶಾಂತ ಸಾಗರ ಸ್ವಾಮೀಜಿ ಚಾಲನೆ ನೀಡಿದರು. ವೈದ್ಯೆ ಎಚ್.ಎಂ.ಸುಮಂಗಳ, ಪ್ರಾಚಾರ್ಯ ಸಿದ್ದರಾಮ ಹಿರೇಮಠ, ಮುಖ್ಯಶಿಕ್ಷಕ ಕೆ.ಎಸ್.ವೀರೇಶ, ಸಾರ್ವಜನಿಕ ಆಸ್ಪತ್ರೆ ಆಪ್ತ ಸಮಾಲೋಚಕ ಕೆ.ಪ್ರಶಾಂತ ಕುಮಾರ್, ಓಬಣ್ಣ ಇದ್ದರು.
Published on

ಕೂಡ್ಲಿಗಿ: ಒಳ್ಳೆಯ ಮಾರ್ಗದಲ್ಲಿ ನಡೆಯಲು ವಿದ್ಯಾರ್ಥಿಗಳು ಉತ್ತಮ ನಡೆ-ನುಡಿ ಅನುಸರಿಸಬೇಕು ಎಂದು ಪ್ರಶಾಂತಸಾಗರ ಸ್ವಾಮೀಜಿ ಹೇಳಿದರು.

ಪಟ್ಟಣದ ಹಿರೇಮಠ ವಿದ್ಯಾಪೀಠ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

ನಾವು ಆಡುವ ಮಾತುಗಳು ಮತ್ತೊಬ್ಬರಿಗೆ ನೋವನ್ನುಂಟು ಮಾಡಬಾರದು. ಮಾತಿನಲ್ಲಿ ಸತ್ವ ಇರಬೇಕು. ಪಾರದರ್ಶಕತ್ವವ ಹೊಂದಿರಬೇಕು. ಅದೇ ರೀತಿ ನಡೆಯೂ ಇರಬೇಕು ಎಂದರು.

ಡಾ.ಎಚ್.ಎಂ.ಸುಮಂಗಳ ಮಾತನಾಡಿ, ಸಾಮಾನ್ಯವಾಗಿ ಮಹಿಳೆಯರಲ್ಲಿ ನಿಶಕ್ತಿ ಹೆಚ್ಚು. ಶಾಲೆ-ಕಾಲೇಜಿಗೆ ಬರುವ ವಿದ್ಯಾರ್ಥಿನಿಯರು ಪೋಷಕಾಂಶ ಇರದ ತಿನಿಸುಗಳನ್ನು ತಿನ್ನುವುದರಿಂದ ಅವರಲ್ಲಿ ಆರೋಗ್ಯದ ಸಮಸ್ಯೆಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ. ಮಹಿಳೆಯರು ಆಹಾರವನ್ನು ಹೇಗೆ, ಯಾವುದು ಎಷ್ಟು ಸೇವಿಸಬೇಕು ಎಂಬುದನ್ನು ತಿಳಿದಿರಬೇಕು ಎಂದರು.

ಪ್ರಮುಖರಾದ ಓಬಣ್ಣ, ಉಪನ್ಯಾಸಕರಾದ ಸತೀಶ್ ಕಾಟಣ್ಣನವರ್, ವೀರಣ್ಣ, ಶಿವಕುಮಾರ್, ಸುಷ್ಮಿತಾ, ಅನಿತಾ, ಮಂಜುಕರ್ ಮೌಳಿ, ಸತ್ಯಮೂರ್ತಿ, ಕೆ.ಎಚ್.ಎಂ.ವೀರೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net