ಆರು ತಿಂಗಳಲ್ಲಿ ಕೆರೆ ಕಾಮಗಾರಿ ಪೂರ್ಣಗೊಳಿಸಿ ; ಶಾಸಕ ವೆಂಕಟರಾವ ನಾಡಗೌಡ ಸೂಚನೆ

Sasalamari Camp Lake Work Bhoomipooja
ಸಿಂಧನೂರು ತಾಲೂಕಿನ ಸಾಸಲಮರಿಕ್ಯಾಂಪ್‌ನಲ್ಲಿ ಕುಡಿವ ನೀರಿನ ಕೆರೆ ನಿರ್ಮಾಣಕ್ಕೆ ಶಾಸಕ ವೆಂಕಟರಾವ ನಾಡಗೌಡ ಭೂಮಿಪೂಜೆ ನೆರವೇರಿಸಿದರು.
Published on

ಸಿಂಧನೂರು: ಕ್ಯಾಂಪಿನ ಜನತೆಗೆ ಕುಡಿವ ನೀರಿನ ವ್ಯವಸ್ಥೆಗೊಳಿಸಿದ್ದು, ಬೇಡಿಕೆ ಈಡೇರಿಸುವ ಮೂಲಕ ಮಾತಿನಂತೆ ನಡೆದುಕೊಂಡಿರುವ ಎಂದು ಶಾಸಕ ವೆಂಕಟರಾವ ನಾಡಗೌಡ ಹೇಳಿದರು.

ತಾಲೂಕಿನ ಸಾಸಲಮರಿಕ್ಯಾಂಪ್‌ನಲ್ಲಿ ಕುಡಿವ ನೀರಿನ ಕೆರೆ ನಿರ್ಮಾಣಕ್ಕೆ ಭೂಮಿಪೂಜೆ ಹಾಗೂ ಪಶು ಚಿಕಿತ್ಸಾಲಯವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಕ್ಯಾಂಪ್‌ನಲ್ಲಿ ಸುಮಾರು ವರ್ಷಗಳಿಂದ ಕುಡಿವ ನೀರಿನ ಸಮಸ್ಯೆ ಇತ್ತು. ಶಾಸಕನಾಗುವ ಮುಂಚೆ ಕ್ಯಾಂಪ್‌ಗೆ ಬಂದ ಸಂದರ್ಭ ಸಮಸ್ಯೆ ಆಲಿಸಿದ್ದೆ. ಈ ಹಿನ್ನೆಲೆಯಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ 47ಲಕ್ಷ ರೂ. ವೆಚ್ಚದಲ್ಲಿ ಕೆರೆಗೆ 2.10 ಎಕರೆ ಭೂಮಿ ಖರೀದಿಸಿ 75 ಲಕ್ಷ ರೂ. ವೆಚ್ಚದಲ್ಲಿ ಕೆರೆ ನಿರ್ಮಿಸಲಾಗವುದು. ಆರು ತಿಂಗಳಲ್ಲಿ ಕೆರೆ ಕಾಮಗಾರಿ ಪೂರ್ಣಗೊಳಿಸಿ ಶುದ್ಧವಾದ ನೀರು ಒದಗಿಸಲಾಗುವುದು ಎಂದರು.

ತಾಪಂ ಅಧ್ಯಕ್ಷೆ ಲಕ್ಷ್ಮ್ಮೀದೇವಿ ಗುರಿಕಾರ, ತಾಪಂ ಸದಸ್ಯೆ ರಾಮಮ್ಮ ರಾಮಣ್ಣ, ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ, ಮುಖಂಡ ಧರ್ಮನಗೌಡ ಮಲ್ಕಾಪುರ, ಎನ್.ವೆಂಕಟೇಶ್ವರಾವ, ನಲ್ಲಾ ವೆಂಕಟರಾವ, ಸಿಂಹಾದ್ರಿ ಆಂಜನೇಯ, ರಂಗಾರೆಡ್ಡಿ ಸಾಸಲಮರಿ, ಶಾಂತರಾಜ, ಸುಬ್ಬಾರಾವ, ವಿಜಯಲಕ್ಷ್ಮ್ಮೀ, ಆನಂದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net