

ಸಿರಿಗೇರಿ: ಸಮೃದ್ಧ ಮಳೆಗಾಗಿ ಪ್ರಾರ್ಥಿಸಿ ಗ್ರಾಮದ ಅಗಸರ ಕೆರೆಯ ದಡದ ಮೇಲಿರುವ ಅಕ್ಕ-ತಂಗಿಯರ ದೇವಸ್ಥಾನದಲ್ಲಿ ಗುರುವಾರ ಗ್ರಾಮಸ್ಥರು ಎಡೆ ಇಟ್ಟು ವಿಶೇಷ ಪೂಜೆ ಸಲ್ಲಿಸಿದರು. ನಂತರ ಪ್ರತಿ ಮನೆಯಿಂದ ಭಕ್ತರು ತಂದ ಹಿಡಿ ಅಕ್ಕಿಯನ್ನು ಸಂಗ್ರಹಿಸಿ ಅನ್ನದಾಸೋಹ ನೆರೆವೇರಿಸಲಾಯಿತು. ಐದು ಜನ ಬಾಲಕರು ನೀರು ತುಂಬಿದ ಬಿಂದಿಗೆ ತಿರುಗಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಿ ‘ಹುಯ್ಯೋ ಹುಯ್ಯೋ ಮಳೆರಾಯ ಗುಬ್ಬಿ ಕುಡಿಯೋಕೆ ನೀರಿಲ್ಲ’ ಎಂದು ಬಾಯಿ ಬಾಯಿ ಬಡಿದುಕೊಳ್ಳುವ ಮೂಲಕ ಪ್ರಾರ್ಥಿಸಿದರು.
ಇದನ್ನೂ ಓದಿ: ಪರಿಸರ ಉಳಿದರೆ ಸಮೃದ್ಧ ಮಳೆ- ಬೆಳೆ