

ಸಂಡೂರು: ತಾಲೂಕಿನ ಸಿದ್ದಾಪುರದಲ್ಲಿ ವಾಂತಿ-ಭೇದಿ ಹತೋಟಿಗೆ ಬಂದಿದ್ದು, ಅಸ್ವಸ್ಥಗೊಂಡವರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗ್ರಾಮಕ್ಕೆ ಮರಳಿದ್ದಾರೆ ಎಂದು ಟಿಎಚ್‌ಒ ಡಾ.ಭರತ್ ಕುಮಾರ್ ಹೇಳಿದರು.
ಸಿದ್ದಾಪುರದಲ್ಲಿ ಶನಿವಾರ ಮುಂಜಾಗ್ರತಾ ಕ್ರಮವಾಗಿ ಏರ್ಪಡಿಸಿದ್ದ ಆರೋಗ್ಯ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮದಲ್ಲಿ ಮತ್ತೆ ಯಾವುದೇ ಪ್ರಕರಣ ವರದಿಯಾಗಿಲ್ಲ. ನಿಯಂತ್ರಣ ಕ್ರಮಗಳನ್ನು ಮುಂದುವರಿಸಲಾಗಿದೆ.
ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಪೈಪ್‌ಲೈನ್ ದುರಸ್ತಿ ಮಾಡಲು ಸೂಚಿಸಲಾಗಿದೆ. ಆಶಾ ಮತ್ತು ಆರೊಗ್ಯ ಇಲಾಖೆ ಸಿಬ್ಬಂದಿ ಮನೆ ಮನೆ ಗೆ ತೆರಳಿ ತಪಾಸಣೆ ಮಾಡುತ್ತಿದ್ದಾರೆ. ಅಲ್ಲದೆ ಶುದ್ಧ ಕುಡಿವ ನೀರು ಬಳಸುವಂತೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಡಾ.ಅಕ್ಷಯ್, ಸಂತೋಷ್, ದೀಪಾ, ಅನಿತಾ, ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಕೊಟ್ರೇಶ್, ಬಂಡೇಗೌಡ, ಆಶಾ ಕಾರ್ಯಕರ್ತೆಯರಾದ ಪರಿಮಳಾ, ರೇಣುಕಾ, ಗೀತಾ, ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮೀ ಇತರರಿದ್ದರು.