ಸಿದ್ದಾಪುರದಲ್ಲಿ ಗದ್ದೆಗೆ ನುಗ್ಗಿದ ಹಳ್ಳ

field
Published on

ಸಿದ್ದಾಪುರ: ಕಲ್ಯಾಣಪುರ ಸಮೀಪ ಹರಿಯುತ್ತಿರುವ ಹಳ್ಳ ತುಂಬಿ ಗದ್ದೆಯ ಮೇಲೆ ನೀರು ಹರಿಯುತ್ತಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಹಳ್ಳಗಳೆಲ್ಲ ತುಂಬಿ ಹರಿಯುತ್ತಿದ್ದು, ಮನೆಗಳಿಗೆ ನೆರೆ ಬರುವ ಸಾಧ್ಯತೆ ಹೆಚ್ಚಾಗಿರುವುದರಿಂದ ತಾಲೂಕು ಆಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.

ಶಿರಳಗಿಯ ದಯಾನಂದ ಕನ್ನ ನಾಯ್ಕ ಅವರ ಎಮ್ಮೆ ಮೇಯಲು ಹೋದಾಗ ಹಳ್ಳದಲ್ಲಿ ಬಿದ್ದು ಸಾವನ್ನಪ್ಪಿದೆ. ಸರಕುಳಿ, ಮಾನಿಹೊಳೆ, ನೆಲೆಮಾಂವ, ಬಿಳಗಿ, ಹೆಮ್ಮನಬೈಲ ಹೊಳೆಗಳು ತುಂಬಿ ಹರಿಯುತ್ತಿದ್ದು, ನೋಡಲು ಜನತೆ ಮುಗಿಬಿದ್ದಿದ್ದಾರೆ. ಸರಕುಳಿ ಹೊಳೆ ತುಂಬಿ ಹರಿದರೆ ವಾಹನ ಸಂಚಾರಕ್ಕೆ ತೊಂದರೆ ಆಗುವ ಸಾಧ್ಯತೆ ಇರುವುದರಿಂದ ತಹಸೀಲ್ದಾರ್ ಮಂಜುನಾಥ ಮುನ್ನೊಳಿ ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರೊಂದಿಗೆ ಚರ್ಚೆ ನಡೆಸಿದರು. ತಾಲೂಕಿನಲ್ಲಿ ಶನಿವಾರ ಬೆಳಗ್ಗೆಯಿಂದ ಭಾನುವಾರ ಬೆಳಗಿನವರೆಗೆ 126.4 ಮಿಮೀ ಮಳೆ ಬಿದ್ದಿದ್ದು, ಇಲ್ಲಿಯವರೆಗೆ 119.98 ಮಿಮೀ ಮಳೆ ಬಿದ್ದು ದಾಖಲಾಗಿದೆ. ಭಾನುವಾರ ದಿನವಿಡಿ ಗಾಳಿ-ಮಳೆ ಜೋರಾಗಿದ್ದರಿಂದ ಜನಜೀವನ ಅಸ್ತವ್ಯವಸ್ತಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net