ಶಿವಾಲಯದಲ್ಲಿ ಆಧ್ಯಾತ್ಮಿಕ ಚಿಂತನ ಶಿಬಿರ ಸಂಪನ್ನ

21manju4
ಬೆಳಗಾವಿ ನಗರದ ಎಚ್.ಡಿ.ಕುಮಾರಸ್ವಾಮಿ ಬಡಾವಣೆಯ ಶಿವಾಲಯದಲ್ಲಿ ಆಧ್ಯಾತ್ಮಿಕ ಚಿಂತನ ಶಿಬಿರ ಜರುಗಿತು. ಪೀಠಾಧಿಪತಿ ಶಂಕರ ದೇವರು, ರುದ್ರಣ್ಣ ಚಂದರಗಿ, ಬಿ.ಐ.ಪಾಟೀಲ ಇತರರಿದ್ದರು.
Published on

ಬೆಳಗಾವಿ: ನಗರದ ಎಚ್.ಡಿ.ಕುಮಾರಸ್ವಾಮಿ ಬಡಾವಣೆ ರಹವಾಸಿಗಳ ಸಂಘ, ಶಿವಾಲಯ ಸೇವಾ ಸಮಿತಿ ಸಂಘದ ಸಂಯುಕ್ತ ಆಶ್ರಯದಲ್ಲಿ ಶ್ರಾವಣ ಸೋಮವಾರ ಅಂಗವಾಗಿ ಶಿವಾಲಯ ಆವರಣದಲ್ಲಿ ಆಧ್ಯಾತ್ಮಿಕ ಚಿಂತನ ಶಿಬಿರ ಈಚೆಗೆ ಜರುಗಿತು. ಬಡಾವಣೆಯ ರಹವಾಸಿಗಳ ಸಂಘದ ಅಧ್ಯಕ್ಷ ರುದ್ರಣ್ಣ ಚಂದರಗಿ ಮಾತನಾಡಿ, ನಮ್ಮ ಬಡಾವಣೆಯಲ್ಲಿ ಅನೇಕ ಸಂಘ ಸಂಸ್ಥೆಗಳಿದ್ದು, ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರಹವಾಸಿಗಳು ಹಾಗೂ ಶಾಸಕರ ಸಹಕಾರದೊಂದಿಗೆ ಬಡಾವಣೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಬಡಾವಣೆಯ ಅಭಿವೃದ್ಧಿ ಕುರಿತು ಎಲ್ಲರೂ ಶ್ರಮಿಸಿ, ಅತ್ಯುತ್ತಮ ಸೌಕರ್ಯಗಳನ್ನು ಒದಗಿಸೋಣ ಎಂದರು.

ಶಿವಾಲಯದ ಸೇವಾ ಸಮಿತಿಯ ಅಧ್ಯಕ್ಷ ಬಿ.ಐ.ಪಾಟೀಲ ಮಾತನಾಡಿ, ಬಡಾವಣೆಯ ಎಲ್ಲ ನಾಗರಿಕರ ಸಹಕಾರದಿಂದ ಮುಂಬರುವ ದಿನಗಳಲ್ಲಿ ಶಿವಾಲಯದಲ್ಲಿ ಆಧ್ಯಾತ್ಮಿಕ ಚಿಂತನ ನಡೆಸೋಣ ಎಂದರು.

ಬೈಲಹೊಂಗಲ ತಾಲೂಕಿನ ಬೈಲವಾಡ ವರ್ತಿ ಕ್ಷೇತ್ರದ ಪೀಠಾಧಿಪತಿ ಶಂಕರ ದೇವರು ಆಶೀರ್ವಚನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net