

ಹರಪನಹಳ್ಳಿ: ತಾಲೂಕಿನ ಶಿಂಗ್ರಿಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಲಚ್ಚಿಬಾಯಿ ಗುಡ್ಯಾನಾಯ್ಕ ಹಾಗೂ ಉಪಾಧ್ಯಕ್ಷರಾಗಿ ಹನುಮಕ್ಕ ಭೂತಪ್ಪ ಅವಿರೋಧ ಆಯ್ಕೆಯಾದರು.
ಒಟ್ಟು 10 ಸದಸ್ಯರಿದ್ದು, ಅಧ್ಯಕ್ಷ ಸ್ಥಾನಕ್ಕೆ ಲಚ್ಚಿಬಾಯಿ ಗುಡ್ಯಾನಾಯ್ಕ, ಉಪಾಧ್ಯಕ್ಷ ಸ್ಥಾನಕ್ಕೆ ಹನುಮಕ್ಕ ಭೂತಪ್ಪನವರು ನಾಮ ಪತ್ರ ಸಲ್ಲಿಸಿದ್ದರು.
ಗ್ರಾಪಂ ಮಾಜಿ ಅಧ್ಯಕ್ಷ ಟಿ.ಶಿವಪ್ಪ, ಮುಖಂಡರಾದ ಸಿ.ಎ ಬಸವರಾಜಪ್ಪ, ಕೊಂಡಜ್ಜಿ ಬಸವರಾಜಪ್ಪ, ಚನ್ನಾಪುರದ ಬಸವರಾಜ, ಕುಮಾರ ನಾಯ್ಕ, ಸಿ.ಗೋಣಿಬಸಪ್ಪ, ಸಿ.ಅಂಜಿನಪ್ಪ, ಸಿ.ವಿಜಯಪ್ಪ, ಜೆ.ಮಂಜುನಾಥ, ಬಿ.ದೇವೇಂದ್ರಪ್ಪ, ಈ.ಸುರೇಶ, ಚೌಟ್ಕಿ ಕೆಂಚಪ್ಪ, ದುಗ್ಯಾನಾಯ್ಕ, ದಿಳ್ಯನಾಯ್ಕ, ಮಂಜನಾಯ್ಕ, ಸಂತೋಷ್ ನಾಯ್ಕ, ದಾದಾವಲಿ ದಸ್ತಗಿರಿ, ಪ್ರಭು, ಬಡಗಿ ದಾದಾಪೀರ್ ಇತರರಿದ್ದರು.
ಇದನ್ನೂ ಓದಿ: ಹಂಚೀಪುರ ಗ್ರಾಪಂ ಅಧ್ಯಕ್ಷರಾಗಿ ರುಕ್ಮಿಣಿ ಆಯ್ಕೆ