

ಸಂಕೇಶ್ವರ: ಪಟ್ಟಣದಲ್ಲಿ ಕರ್ನಾಟಕ ರಾಜ್ಯೋತ್ಸವ ಮೆರವಣಿಗೆಯು ಶನಿವಾರ ಅದ್ದೂರಿಯಾಗಿ ಜರುಗಿತು. ಬೆಳಗ್ಗೆ ಗಾಂಧಿ ವೃತ್ತದಲ್ಲಿ ಕನ್ನಡ ಧ್ವಜಾರೋಹಣ ಹಾಗೂ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಶಾಲಾ ಮಕ್ಕಳು ಹಾಗೂ ಜಾನಪದ ಕಲಾ ತಂಡದಿಂದ ವಿವಿಧ ರೂಪಕಗಳು ಸೇರಿ ಸಕಲ ವಾದ್ಯಮೇಳಗಳು ಪಾಲ್ಗೊಂಡಿದ್ದವು. ಚನ್ನಮ್ಮ ವೃತ್ತದಲ್ಲಿ ಕಿಕ್ಕಿರಿದು ಜನ ಸೇರಿರುವುದು ಕಂಡುಬಂತು.
ಶಾಸಕ ನಿಖಿಲ್ ಕತ್ತಿ, ಹಿರಿಯ ಧುರೀಣ ಅಪ್ಪಾಸಾಹೇಬ ಶಿರಕೋಳಿ, ಪುರಸಭೆ ಮಾಜಿ ಅಧ್ಯಕ್ಷ ಅಮರ ನಲವಡೆ, ಬಸನಗೌಡ ಪಾಟೀಲ, ಗಜಾನನ ಕ್ವಳ್ಳಿ, ಶ್ರೀಕಾಂತ ಹತನೂರಿ, ಡಾ.ಜಯಪ್ರಕಾಶ ಕರಜಗಿ, ಸುನೀಲ ಪರ್ವತರಾವ, ಪ್ರಮೋದ ಹೊಸಮನಿ, ಶಿವಾನಂದ ಮುಡಸಿ, ವಿನೋದ ನಾಯಿಕ, ಪ್ರವೀಣ ನೇಸರಿ, ದಿಲೀಪ ಹೊಸಮನಿ, ಬಸನಗೌಡ ಪಾಟೀಲ, ರೋಹನ್ ನೇಸರಿ, ಸಚಿನ ಹೆಗಡೆ, ಸಂತೋಷ ಕಮನೂರಿ, ಆನಂದ ಸಂಸುದ್ದಿ, ಸಂತೋಷ ಮುಡ ಇತರರಿದ್ದರು.