ಸಂಕೇಶ್ವರದಲ್ಲಿ ಅದ್ದೂರಿ ರಾಜ್ಯೋತ್ಸವ

4SANKESHWAR2
Published on

ಸಂಕೇಶ್ವರ: ಪಟ್ಟಣದಲ್ಲಿ ಕನ್ನಡ ರಾಜ್ಯೋತ್ಸವವನ್ನು ಮಂಗಳವಾರ ಅದ್ದೂರಿಯಾಗಿ ಆಚರಿಸಲಾಯಿತು. ಶಾಲಾ ಮಕ್ಕಳ ನೃತ್ಯ, ಭವ್ಯ ರೂಪಕಗಳು, ಭುವನೇಶ್ವರಿ ದೇವಿ ಮೆರವಣಿಗೆ, ಹಳದಿ, ಕೆಂಪು ಬಣ್ಣದ ಧ್ವಜಗಳಿಂದ ಪಟ್ಟಣ ಕಂಗೊಳಿಸಿತು.

70ನೇ ಕನ್ನಡ ರಾಜ್ಯೋತ್ಸವ ನಿಮಿತ್ತ ನಿಡಸೋಸಿ ಶ್ರೀ ದುರದುಂಡೀಶ್ವರ ಮಠದ ಉತ್ತರಾಧಿಕಾರಿ ನಿಜಲಿಂಗೇಶ್ವರ ಸ್ವಾಮೀಜಿ, ವೀರಶೈವ ಲಿಂಗಾಯತ ಸಮುದಾಯದ ಅಧ್ಯಕ್ಷ ಅಪ್ಪಾಸಾಹೇಬ ಶಿರಕೋಳಿ ಮತ್ತು ಪ್ರಮುಖರು ಧ್ವಜಾರೋಹಣ ಹಾಗೂ ಶ್ರೀ ಭುವನೇಶ್ವರಿ ದೇವಿಗೆ ಪೂಜೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ಮೆರವಣಿಗೆಯು ಪಟ್ಟಣದ ಗಾಂಧಿ ವೃತ್ತದಿಂದ ಆರಂಭಗೊಂಡು ವೀರರಾಣಿ ಚನ್ನಮ್ಮ ವೃತ್ತದಲ್ಲಿ ಸೇರಿ ವಿಜೃಂಭಣೆ ರಾಜ್ಯೋತ್ಸವಕ್ಕೆ ಸಾಕ್ಷಿಯಾದರು. ಸಂಕೇಶ್ವರ ್ರೆಂಡ್ಸ್ ೌಂಡೇಷನ್ ಕಾರ್ಯಕರ್ತರು ಜನರಿಗೆ ಊಟದ ವ್ಯವಸ್ಥೆ ಮಾಡಿದ್ದರು.

ರಾಜ್ಯೋತ್ಸವ ಸಮಿತಿ ಅಧ್ಯಕ್ಷ ಪ್ರಮೋದ ಹೊಸಮನಿ, ಉಪಾಧ್ಯಕ್ಷ ಶಿವಾನಂದ ಸಮ್ಮಕ್ಕನ್ನವರ, ಪ್ರಧಾನ ಕಾರ್ಯದರ್ಶಿ ಸಂತೋಷ ಪಾಟೀಲ, ಸಂತೋಷ ಅಲತಗಿ, ಅಶ್ವಿನ ಕೇಸ್ತಿ, ಖಜಾಂಚಿ ರಾಹುಲ ವಾರಕರಿ, ಮಹೇಶ ಹಟ್ಟಿಹೊಳಿ, ದಿಲೀಪ ಹೊಸಮನಿ, ಸಂತೋಷ ಮುಡಶಿ, ಅಭಿಜಿತ ಕುರಣಕರ, ರೋಹನ ನೇಸರಿ, ಆನಂದ ಸಂಸುದ್ದಿ, ಉದ್ಯಮಿ ಯಾಯಾಖಾನ್ ನದಾ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮಠದ, ಸಿಪಿಐ ಶಿವಶರಣ ಅವಜಿ, ಪುರಸಭೆ ಸದಸ್ಯ ಸುನೀಲ ಪರ್ವತರಾವ, ಅಮರ ನಲವಡೆ, ಡಾ.ಜಯಪ್ರಕಾಶ ಕರಜಗಿ, ಶಿವಾನಂದ ಮುಡಶಿ, ಗಜಾನನ ಕ್ವಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net