ಸಂಡೂರಿನಲ್ಲಿ ವಿದ್ಯಾರ್ಥಿಗಳಿಂದ ಜಾಥಾ

27 SANDOOR 03
ಸಂಡೂರು ಬಿಕೆಜಿ ಗ್ಲೋಬಲ್ ಶಾಲೆ ಹಾಗೂ ಭಾರತೀಯ ಗಣಿ ಬ್ಯೂರೋದ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Published on

ಸಂಡೂರು: ಸ್ವಚ್ಛತಾ ಹೀ ಸೇವಾ ನಿಮಿತ್ತ ಬಿಕೆಜಿ ಗ್ಲೋಬಲ್ ಶಾಲೆ ಹಾಗೂ ಭಾರತೀಯ ಗಣಿ ಬ್ಯೂರೋದ ಸಹಯೋಗದಲ್ಲಿ ಸ್ವಚ್ಛತಾ ನಡಿಗೆ ಕಾರ್ಯಕ್ರಮ ಗುರುವಾರ ನಡೆಯಿತು.

ಭಾರತೀಯ ಗಣಿ ಬ್ಯೂರೋ ಆಫ್ ಮೈನ್ಸ್ ದಕ್ಷಿಣ ವಲಯ ನಿಯಂತ್ರಕ ಜಯಕೃಷ್ಣಬಾಬು, ಸಹಾಯಕ ನಿಯಂತ್ರಕ ಶಿವಕುಮಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ಮಕ್ಕಳು ಹಾಗೂ ಸಿಬ್ಬಂದಿ ಸ್ವಚ್ಛತೆಯ ಮಹತ್ವ ಸಾರುವ ಫಲಕಗಳನ್ನು ಹಿಡಿದು ನಗರದ ಪ್ರಮುಖ ರಸ್ತೆಗಳಲ್ಲಿ ಸ್ವಚ್ಛತಾ ನಡಿಗೆ ಕೈಗೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಬಿಕೆಜಿ ಸಂಸ್ಥೆ ನಿರ್ದೇಶಕರಾದ ಬಿ.ನಾಗನಗೌಡ, ಬಿ.ರುದ್ರಗೌಡ, ಬಿ.ಕೆ.ಬಸವರಾಜಗೌಡ, ಹಿರಿಯ ಅಧಿಕಾರಿಗಳಾದ ಪಿ.ಶ್ರೀನಿವಾಸ ರಾವ್, ಪ್ರಮೋದ್ ರಿತ್ತಿ, ರಾಜಶೇಖರ ಬೆಲ್ಲದ್, ಬಿಕೆಜಿ ಪಪೂ ಕಾಲೇಜು ಪ್ರಾಂಶುಪಾಲ ಕೆ.ವಿ.ಮೋಹನರಾವ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net