ರಾಮಸಾಗರದಲ್ಲಿ ಪಶು ಚಿಕಿತ್ಸಾಲಯ ಶೀಘ್ರ

26 KMP 04
ಡಾ.ಕೆ.ಯು.ಬಸವರಾಜ
Published on

ಕಂಪ್ಲಿ: ತಾಲೂಕಿನ ರಾಮಸಾಗರ ಗ್ರಾಮದಲ್ಲಿ ಪಶುಚಿಕಿತ್ಸಾಲಯ ಆರಂಭಿಸಲಾಗುವುದು ಎಂದು ಇಲ್ಲಿನ ಪಶು ಆಸ್ಪತ್ರೆ ಪ್ರಭಾರ ಮುಖ್ಯ ಪಶು ವೈದ್ಯಾಧಿಕಾರಿ ಕೆ.ಯು.ಬಸವರಾಜ ತಿಳಿಸಿದರು.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಹೊಸದಾಗಿ 100ಪಶುಚಿಕಿತ್ಸಾಲಯಗಳನ್ನು ಹಂತಹಂತವಾಗಿ ಪ್ರಾರಂಭಿಸಲು ಅನುಮತಿಸಿದ ಮೇರೆಗೆ 20ಹೊಸ ಪಶುಚಿಕಿತ್ಸಾಲಯಗಳನ್ನು ಆರಂಭಿಸಲು ಇಲಾಖೆ ಆದೇಶಿಸಿದೆ.

ಈ ಹಿನ್ನೆಲೆಯಲ್ಲಿ ಪಶು ಚಿಕಿತ್ಸಾಲಯಕ್ಕೆ ಜಾಗ ಒದಗಿಸುವಂತೆ ರಾಮಸಾಗರದ ಗ್ರಾಪಂಗೆ ಪತ್ರ ಬರೆಯಲಾಗುವುದು. ಕಟ್ಟಡ ನಿರ್ಮಾಣವಾಗುವತನಕ ತಾತ್ಕಾಲಿಕ ಕಟ್ಟಡ ಒದಗಿಸುವಂತೆಯೂ ಕೋರಲಾಗುವುದು. ಗ್ರಾಪಂ ಜಾಗ ನೀಡಿದ ನಂತರ ಇಲಾಖೆ ಹಣ ಬಿಡುಗಡೆಗೊಳಿಸಲಿದ್ದು ಕಟ್ಟಡ ನಿರ್ಮಾಣ ಪ್ರಕ್ರಿಯೆ ಆರಂಭಗೊಳ್ಳಲಿದೆ. ಸದ್ಯ ಗ್ರಾಪಂ ನೀಡುವ ತಾತ್ಕಾಲಿಕ ಕಟ್ಟಡದಲ್ಲಿ ಪಶು ಚಿಕಿತ್ಸಾಲಯ ಆರಂಭಿಸಲು ಉದ್ದೇಶಿಸಿದ್ದು, ಇದ್ದ ಸಿಬ್ಬಂದಿಯಲ್ಲಿಯೇ ಹೊಂದಾಣಿಕೆ ಮಾಡಿ ಚಿಕಿತ್ಸಾಲಯ ಆರಂಭಿಸಲಾಗುವುದು ಎಂದು ತಿಳಿಸಿದರು.

ರಾಮಸಾಗರ ಗ್ರಾಮದಲ್ಲಿ ಪಶುಚಿಕಿತ್ಸಾಲಯ ಆರಂಭಿಸುವಂತೆ ‘ಪಾಳು ಬಿದ್ದ ಗ್ರಾಮೀಣ ಸಂತೆ ಕಟ್ಟೆ’ ಶೀರ್ಷಿಕೆಯಡಿ 2024ರ ಡಿ.27ರಂದು ವಿಜಯವಾಣಿಯಲ್ಲಿ ಪ್ರಕಟಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net