

ರಾಮದುರ್ಗ: ತೀವ್ರ ಕುತೂಹಲ ಕೆರಳಿಸಿದ್ದ ಪುರಸಭೆ ಅಧ್ಯ&ಉಪಾಧ್ಯರ ಆಯ್ಕೆ ಚುನಾವಣೆ ಪ್ರಕ್ರಿಯೆಯಲ್ಲಿ ಬಿಜೆಪಿ ಮತ್ತೆ ಮೇಲುಗೆ ಸಾಧಿಸಿದ್ದು, ಅಧ್ಯೆಯಾಗಿ ಬಿಜೆಪಿಯ ಲಕ್ಷಿ$್ಮ ಕಡಕೋಳ, ಉಪಾಧ್ಯೆಯಾಗಿ ಸರಿತಾ ಧೂತ ಅವಿರೋಧವಾಗಿ ಆಯ್ಕೆಯಾದರು.
ಅಧ್ಯ ಸ್ಥಾನಕ್ಕೆ ಕಾಂಗ್ರೆಸ್ನಿಂದ ಶಂಕ್ರಪ್ಪ ಸುಳಿಭಾವಿ, ಬಿಜೆಪಿಯಿಂದ ಲಕ್ಷಿ$್ಮ ಕಡಕೋಳ ಹಾಗೂ ಉಪಾಧ್ಯ ಸ್ಥಾನಕ್ಕೆ ಬಿಜೆಪಿಯಿಂದ ಸರಿತಾ ದೂತ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಕೊನೆಗೆ ಶಂಕ್ರಪ್ಪ ನಾಮಪತ್ರ ಹಿಂಪಡೆದರು. ಹೀಗಾಗಿ ಅವಿರೋಧ ಆಯ್ಕೆ ನಡೆದಿದೆ ಎಂದು ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ೂಷಿಸಿದರು.
ವಿಲವಾದ ಆಪರೇಷನ್ ಹಸ್ತ: ಬಹುಮತ ಇಲ್ಲದಿದ್ದರೂ ಕಾಂಗ್ರೆಸ್ ಮುಖಂಡರು, ಪುರಸಭೆಯ ಚುಕ್ಕಾಣಿ ಹಿಡಿಯಲು ಬಿಜೆಪಿಯ ಐವರು ಸದಸ್ಯರನ್ನು ಆಪರೇಷನ್
ಹಸ್ತ ಮಾಡುವ ಪ್ರಯತ್ನದಲ್ಲಿದ್ದರು. ಆದರೆ, ಬಿಜೆಪಿ ಮುಖಂಡರು ಆ ಪ್ರಯತ್ನ ವಿಲ ಮಾಡಿದರು.
ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ನಿವಾಸದ ಎದುರು ಜಮಾಯಿಸಿ ಗುಲಾಲು ಎರಚಿ ಸಂಭ್ರಮಿಸಿದರು. ಬಿಜೆಪಿ ಜಿಲ್ಲಾಧ್ಯ ಸುಭಾಸ ಪಾಟೀಲ, ಧನಲಕ್ಷಿ$್ಮ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯ ಮಲ್ಲಣ್ಣ ಯಾದವಾಡ, ಮುಖಂಡರಾದ ಮಾರುತಿ ಕೊಪ್ಪದ, ರಾಜೇಶ ಬೀಳಗಿ, ಮಾರುತಿ ತುಪ್ಪದ, ಪುರಸಭೆಯ ಸರ್ವ ಬಿಜೆಪಿ ಸದಸ್ಯರು, ಕಾರ್ಯಕರ್ತರು ಹಾಗೂ ಮತ್ತಿತರರಿದ್ದರು.