ರಾಮದುರ್ಗದಲ್ಲಿ ಹೆಸ್ಕಾಂ ಕಚೇರಿ ಆರಂಭ

25RAM1
Published on

ರಾಮದುರ್ಗ: ರೆತರ ಸಂಕಷ್ಟಕ್ಕೆ ಸ್ಪಂದಿಸಲು ರಾಮದುರ್ಗದಲ್ಲಿ ಹೆಸ್ಕಾಂ ವಿಭಾಗ ಕಚೇರಿ ಆರಂಭಿಸಲಾಗಿದ್ದು, ಸದುಪಯೋಗ ಪಡೆಯಬೇಕು ಎಂದು ವಿಧಾನಸಭೆ ಮುಖ್ಯಸಚೇತಕ ಅಶೋಕ ಪಟ್ಟಣ ಹೇಳಿದರು.

ಪಟ್ಟಣದಲ್ಲಿ ಹೆಸ್ಕಾಂ ವಿಭಾಗ ಹಾಗೂ ಉಪವಿಭಾಗ ಕಚೇರಿ ಕಟ್ಟಡ ಈಚೆಗೆ ಉದ್ಘಾಟಿಸಿ ಮಾತನಾಡಿದ ಅವರು, ಈ ಮೊದಲು ರೆತರು ವಿದ್ಯುತ್​ ಪರಿವರ್ತಕ ಸೇರಿ ಯಾವುದೇ ಕೆಲಸಕ್ಕಾಗಿ ಬೆಲಹೊಂಗಲಕ್ಕೆ ಅಲೆಯಬೇಕಾಗಿತ್ತು. ಇದೀಗ ಆ ಸಂಕಷ್ಟ ತಪ್ಪಲಿದೆ. ತಾಲೂಕಿನ ಬಟಕುರ್ಕಿ, ಸುರೇಬಾನ, ಹುಲಕುಂದ ಗ್ರಾಮ 33 ಕೆವಿ ವಿದ್ಯುತ್​ ಪರಿವರ್ತಕ ಕೇಂದ್ರ 110 ಕೆವಿಗೆ ಮೇಲ್ದರ್ಜೆಗೇರಿಸಲಾಗುತ್ತಿದೆ. ವಿದ್ಯುತ್​ ಅಭಾವ ನೀಗಿಸಲು ಸಾಲಹಳ್ಳಿಯಲ್ಲಿ 106 ಕೋಟಿ ರೂ. ವೆಚ್ಚದ 220 ಕೆವಿ ವಿದ್ಯುತ್​ ಕೇಂದ್ರ ಕಾಮಗಾರಿ ಮುಕ್ತಾಯ ಹಂತದಲ್ಲಿದೆ ಎಂದರು. ತಾಲೂಕಿನ ಪದಮಂಡಿ, ಸಾಲಾಪುರ, ಮುದೇನೂರ, ಬುದ್ನಿಖುರ್ದ, ಮಾಗನೂರ, ತೋರಣಗಟ್ಟಿ, ಚಿಲಮೂರ ಗ್ರಾಮದಲ್ಲಿ 110 ಕೆವಿ ವಿದ್ಯುತ್​ ಕೇಂದ್ರ 20 ಕೋಟಿ ರೂ. ವೆಚ್ಚದೊಂದಿಗೆ ಮಂಜೂರಾಗಿದೆ ಎಂದರು. ಹುಬ್ಬಳ್ಳಿ ವಿದ್ಯುತ್​ ಸರಬರಾಜು ಕಂಪನಿ ಅಧ್ಯ ಸೆಯದ್​ ಅಜೀಂಪೀರ ಖಾದ್ರಿ ಮಾತನಾಡಿ, ರಾಜ್ಯ ಸರ್ಕಾರದ ಗಹಜ್ಯೋತಿ ಯೋಜನೆ ಶೇ.98 ಜನ ಉಪಯೋಗಿಸುತ್ತಿದ್ದಾರೆ ಎಂದರು. ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ವೆಶಾಲಿ ಎಂ.ಎನ್​. ಮಾತನಾಡಿ, ಗುಣಮಟ್ಟದ

ಸೇವೆ ಹಾಗೂ ನಿರಂತರ ವಿದ್ಯುತ್​ ನೀಡಲು ಇಲಾಖೆ ಬದ್ಧವಾಗಿದೆ ಎಂದರು. ಪುರಸಭೆ ಅಧ್ಯೆ ಲಕ್ಷಿ$್ಮ ಕಡಕೋಳ, ಗ್ಯಾರಂಟಿ ಅನುಷ್ಠಾನ ಯೋಜನೆ ತಾಲೂಕು ಅಧ್ಯ ಜಿ.ಬಿ.ರಂಗನಗೌಡ್ರ, ಹೆಸ್ಕಾಂ ನಿರ್ದೇಶಕ ಎಸ್​. ಜಗದೀಶ, ಮುಖ್ಯ ಅಭಿಯಂತ ಪ್ರವಿಣಕುಮಾರ ಚಿಕಡೆ, ಕಾರ್ಯನಿರ್ವಾಹಕ ಅಭಿಯಂತ ಬಿ.ವೆ. ಹೊಳೆಗಾರ, ಇಲಾಖೆ ಅಧೀಕ ಅಭಿಯಂತ ರಾಜೇಂದ್ರ ಕೋರೆ, ಗುತ್ತಿಗೆದಾರ ಗೋಪಾಲ ಸಂಶಿ, ಇಇ ಕಿರಣ ಸಣ್ಣಕ್ಕಿ, ಲಕ್ಷ$್ಮಣ ಅಣ್ಣಿಗೇರಿ, ಎಇಇ ಶಿವಪ್ರಕಾಶ ಕರಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net