ಲಾಭದಲ್ಲಿ ಪಯೋನೀರ್ ಕೋ-ಆಪ್ ಬ್ಯಾಂಕ್

2Manju14
ಬೆಳಗಾವಿಯಲ್ಲಿ ಪಯೋನೀರ್ ಅರ್ಬನ್ ಕೋ-ಆಪ್ ಬ್ಯಾಂಕಿನ ವಾರ್ಷಿಕ ಮಹಾಸಭೆ ಜರುಗಿತು. ಪ್ರದೀಪ ಅಷ್ಟೇಕರ, ರಂಜಿತ ಚವ್ಹಾಣ ಪಾಟೀಲ, ಅನಂತ ಲಾಡ್, ಶಿವರಾಜ ಪಾಟೀಲ, ಸುವರ್ಣಾ ಶಹಾಪುರಕರ ಇತರರಿದ್ದರು.
Published on

ಬೆಳಗಾವಿ: ಇಲ್ಲಿನ ಲೋಕಮಾನ್ಯ ರಂಗಮಂದಿರದಲ್ಲಿ ಸೋಮವಾರ ಬೆಳಗಾವಿಯ ಪಯೋನೀರ್ ಅರ್ಬನ್ ಕೋ-ಆಪ್ ಬ್ಯಾಂಕಿನ 118ನೇ ವಾರ್ಷಿಕ ಮಹಾಸಭೆ ಬ್ಯಾಂಕ್ ಅಧ್ಯಕ್ಷ ಪ್ರದೀಪ ಅಷ್ಟೇಕರ ಅಧ್ಯಕ್ಷತೆಯಲ್ಲಿ ಜರುಗಿತು. ಪ್ರದೀಪ ಅಷ್ಟೇಕರ ವಾರ್ಷಿಕ ವರದಿ ಮಂಡಿಸಿ, ಆರ್ಥಿಕ ವರ್ಷದಲ್ಲಿ ಬ್ಯಾಂಕ್ 2.5 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಪ್ರಥಮ ಬಾರಿಗೆ 156.70 ಕೋಟಿ ರೂ.ಠೇವಣಿ ಮೈಲಿಗಲ್ಲು ದಾಟಿದೆ. 116.12 ಕೋಟಿ ರೂ.ಸಾಲ ನೀಡಲಾಗಿದೆ. ವರ್ಷದಲ್ಲಿ ಬ್ಯಾಂಕಿನ ಠೇವಣಿ 29.23 ಕೋಟಿ ರೂ. ಗಣನೀಯ ಏರಿಕೆಯಾಗಿದೆ. 21.96 ಕೋಟಿ ರೂ.ಸಾಲ ಪ್ರಮಾಣವೂ ಏರಿಕೆಯಾಗಿದೆ. ಸತತ ಮೂರು ವರ್ಷಗಳ ಕಾಲ ಆಡಿಟ್ ರೇಟಿಂಗ್ ’ಎ’ ಶ್ರೇಣಿ ಪಡೆದಿದೆ. ಆಡಳಿತ ಮಂಡಳಿಯು ’ಎ’ ವರ್ಗದ ಸದಸ್ಯರಿಗೆ ಶೇ.20 ಡಿವಿಡೆಂಡ್ ಮತ್ತು ’ಬಿ’ ವರ್ಗದ ಸದಸ್ಯರಿಗೆ ಶೇ.8 ಡಿವಿಡೆಂಡ್ ಶಿಫಾರಸು ಮಾಡಿದೆ ಎಂದು ತಿಳಿಸಿದರು. ಬ್ಯಾಂಕ್‌ನ ಮೂರು ಹೊಸ ಶಾಖೆ ತೆರೆಯಲು ಆರ್‌ಬಿಐ ಅನುಮತಿ ನೀಡಿದ್ದು, ಶೀಘ್ರ ಹಿಂಡಲಗಾ, ವಡಗಾಂವ ಮತ್ತು ಕಣಬರ್ಗಿಯಲ್ಲಿ ಶಾಖೆ ತೆರೆಯಲಾಗುವುದು. ಆರ್ಥಿಕ ವರ್ಷದಲ್ಲಿ 200 ಕೋಟಿ ರೂ.ಠೇವಣಿ ದಾಟಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಉಪಾಧ್ಯಕ್ಷ ರಂಜಿತ ಚವ್ಹಾಣ ಪಾಟೀಲ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅನಂತ ಲಾಡ್, ನಿರ್ದೇಶಕ ಶಿವರಾಜ ಪಾಟೀಲ, ಸುವರ್ಣಾ ಶಹಾಪುರಕರ, ಗಜಾನನ ಪಾಟೀಲ, ರವಿ ದೊಡನ್ನವರ, ಯಲ್ಲಪ್ಪ ಬೆಳಗಾಂವಕರ, ಲಕ್ಷ್ಮೀ ಕಾನೂರಕರ, ಸುಹಾಸ ತರಾಳ, ಗಜಾನನ ಠೋಕನೇಕರ, ವಿದ್ಯಾಧರ ಕುರಣೆ, ಮಾರುತಿ ಸೀಗಿಹಳ್ಳಿ, ಬಸವರಾಜ ಇಟ್ಟಿ, ರೋಹನ ಚೌಗುಲೆ, ಸಿಇಒ ಅನಿತಾ ಮೂಲ್ಯಾ ಹಾಗೂ ನಿತಿನ ಹಿರೇಮಠ, ಜ್ಞಾನೇಶ್ವರ ಸಾಯಿನೇಕರ, ಕಮಲೇಶ ಮಾಯಾನಾಚೆ, ವಿಕಾಸ ಕಲಘಟಗಿ, ದೇವಕುಮಾರ ಬಿರ್ಜೆ, ನಾರಾಯಣ ಕಿಟವಾಡಕರ, ವಿಠ್ಠಲ ಪೋಳ, ವಿಜಯ ಮೋರೆ, ಮಲ್ಲೇಶ ಚೌಗುಲೆ, ಪರಶುರಾಮ ಮುರಕುಟೆ, ಶರದ ಮಾನೆ, ದುಧಾಜಿ ಖನ್ನುಕರ, ಪರಶರಾಮ ಮಾಳಿ, ಬಸವಂತ ಮಾಯಾನಾಚೆ, ಶಿವಾಜಿ ರಾಕ್ಷೆ, ಸುನೀಲ ದೇಸೂರಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net