ಲಾಭದಲ್ಲಿ ಮಹಾವೀರ ಸೊಸೈಟಿ

8Huk1
Published on

ಹುಕ್ಕೇರಿ: ಸದಸ್ಯರು, ಗ್ರಾಹಕರು ಮತ್ತು ಠೇವಣಿದಾರರ ವಿಶ್ವಾಸದಿಂದ ಮಹಾವೀರ ಮಲ್ಟಿಪರ್ಪಸ್ ಸೌಹಾರ್ದ ಸಹಕಾರಿ ಸಂಘ ಶಿವಮೊಗ್ಗ, ಧಾರವಾಡ ಜಿಲ್ಲೆಗೂ ತನ್ನ ಕಾರ್ಯ ವಿಸ್ತರಿಸುತ್ತಿದೆ ಎಂದು ಅಧ್ಯಕ್ಷ ಮಹಾವೀರ ನಿಲಜಗಿ ತಿಳಿಸಿದರು.

ಮಹಾವೀರ ಶಿಕ್ಷಣ ಸಂಸ್ಥೆ ಆವರಣದಲ್ಲಿ ಸೋಮವಾರ ಹಮ್ಮಿಕೊಂಡ ಸಂಘದ 25ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿ, ಸಹಕಾರಿ 2025ರ ಮಾರ್ಚ್ ಅಂತ್ಯಕ್ಕೆ 3.55 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಮತ್ತಷ್ಟು ಶಾಖೆ ತೆರೆಯಲು ನಿರ್ಧರಿಸಿದೆ ಎಂದರು.

ಸಾಗರ, ಹುಬ್ಬಳ್ಳಿ, ಪಟ್ಟಣಕೋಡಿ, ಉಗಾರ ಖುರ್ದ ಗ್ರಾಮದಲ್ಲೂ ಶಾಖೆ ತೆರೆಯಲು ಸಭೆಯ ಅನುಮೋದನೆ ಪಡೆದಿದೆ. ಸಹಕಾರಿ ಇದೀಗ ಹೆಮ್ಮರವಾಗಿದೆ. ಇದಕ್ಕೆ ಗ್ರಾಹಕ ಮತ್ತು ಸಿಬ್ಬಂದಿಗಳ ಪ್ರಾಮಾಣಿಕತೆ ಕಾರಣ. ಶಿಕ್ಷಣ ಸಂಸ್ಥೆ ಪ್ರಾರಂಭಿಸಿದ್ದು, ಅದು ಪ್ರಾಥಮಿಕ ಹಂತದಿಂದ ಡಿಗ್ರಿ ಕಾಲೇಜು ವರೆಗೆ ಬೆಳೆದಿದೆ ಎಂದು ತಿಳಿಸಿದರು.

ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಜೇಂದ್ರ ಪಾಟೀಲ ಹಲವಾರು ವಿಷಯಗಳನ್ನು ಮಂಡಿಸಿದರು.

ಸಹಕಾರಿ ಉಪಾಧ್ಯಕ್ಷ ರೋಹಿತ ಚೌಗಲಾ, ನಿರ್ದೇಶಕರಾದ ಬಾಹುಬಲಿ ಸೊಲ್ಲಾಪೂರೆ, ಅಶೋಕ ಪಾಟೀಲ, ಸಂಜಯ ನಿಲಜಗಿ, ಕಿರಣ ಸೊಲ್ಲಾಪೂರೆ, ಬಿ.ಬಿ.ಲಠ್ಠೆ, ಪ್ರಜ್ವಲ ನಿಲಜಗಿ, ಸುಕುಮಾರ ಖತಗಲ್ಲಿ, ಸುಕುಮಾರ ಪಾಟೀಲ, ಸಿದ್ದಪ್ಪ ಕಂಠಿಕಾರ, ಅನುಪಮಾ ಕಬಾಡಗೆ, ಅಶ್ವಿನಿ ಪಾಟೀಲ, ಪ್ರಧಾನ ವ್ಯವಸ್ಥಾಪಕ ರಾಜೇಂದ್ರ ಪಾಟೀಲ, ಶಾಖಾ ಕಾರ್ಯದರ್ಶಿ ಸಂತೋಷಸಿಂಗ್ ರಜಪೂತ, ತವನಪೊಪ ಹಿತ್ತಲಕೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net