

ಗೋಕಾಕ: ಪ್ರಸಕ್ತ ಸಾಲಿನಲ್ಲಿ ಗೋಕಾಕ ಪ್ರಾಥಮಿಕ ಕಷಿ ಪತ್ತಿನ ಸಹಕಾರ ಸಂಘ ನಿಯಮಿತ 23.61 ಕೋಟಿ ರೂ. ವಹಿವಾಟು ನಡೆಸಿ 24 ಲಕ್ಷ ರೂ. ಲಾಭಗಳಿಸಿ ಪ್ರಗತಿ ಪಥದತ್ತ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಬಸವರಾಜ ಭಂಡಾರಿ ಹೇಳಿದರು.
ನಗರದ ಗೋಕಾಕ ಪ್ರಾಥಮಿಕ ಕಷಿ ಪತ್ತಿನ ಸಹಕಾರ ಸಂಘದ ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 97ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿ, ಸಂಘದ ಪ್ರಗತಿಗೆ ಸದಸ್ಯರು ಸಹರಿಸುವಂತೆ ಕೋರಿದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಸತ್ಕರಿಸಲಾಯಿತು.
ಉಪಾಧ್ಯಕ್ಷೆ ಸರೋಜಿನಿ ಹೆಗ್ಗನ್ನವರ, ನಿರ್ದೇಶಕರಾದ ಮಾರುತಿ ಜಡೆನ್ನವರ, ಗಜಾನನ ತಟ್ಟಿಮನಿ, ಚೂನಪ್ಪ ಹಟ್ಟಿ, ಮದನ ಮಾವರಕರ, ಮಲ್ಲಿಕಾರ್ಜುನ ಪೂಜಾರಿ, ಸತ್ತೆಪ್ಪ ಸುಭಂಜಿ, ವಿಠ್ಠಲ ಉಳ್ಳಾಗಡ್ಡಿ, ಲಕ್ಷ್ಮಣ ಗೊರಗುದ್ದಿ, ಅನಸುಯಾ ಧುಳಾಯಿ, ಲಲಿತಾ ಜೋಗೋಜಿ ಹಾಗೂ ಮುಖ್ಯಕಾರ್ಯನಿರ್ವಾಹಕಿ ಭಾರತಿ ಕೊಳವಿ ಇತರರಿದ್ದರು.