

ಸಂಬರಗಿ: ಸಮೀಪದ ಖಿಳೇಗಾಂವ ವಿವಿಧ ಉದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ 11.54 ಕೋಟಿ ರೂ. ಸಾಲ ವಿತರಿಸಿದೆ. 36.11 ಲಕ್ಷ ರೂ. ಲಾಭದಲ್ಲಿ ಮುನ್ನಡೆಯುತ್ತಿದ್ದು, ಸದಸ್ಯರಿಗೆ ಶೇ.8 ಲಾಭಾಂಶ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಸಂಜಯ ಉಮರೆ ಹೇಳಿದರು.
ಖಿಳೇಗಾಂವ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಕಾರ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಸಂಘವು 1.83 ಕೋಟಿ ರೂ. ಷೇರು ಬಂಡವಾಳ ಹೊಂದಿದ್ದು, ಒಟ್ಟು 2,336 ಸದಸ್ಯರನ್ನು ಒಳಗೊಂಡಿದೆ ಎಂದು ತಿಳಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಸುನೀಲ ಉಮರೆ ವರದಿ ಓದಿದರು. ಸಂಘದ ನಿರ್ದೇಶಕ ಗಣೇಶ ಹೊನ್ನಗೋಳ, ರಾಜು ಬಗಲಿ, ಕಲ್ಲಪ್ಪ ಗುರುಪಾದಗೋಳ, ಗುರುಪಾದ ಅಲಿಕಾಟಿ, ಸುಶಿಲಾಬಾಯಿ ಗುರವ, ಕವಿತಾ ತಗಲಿ, ಸುಭಾಷ, ಬಸಪ್ಪ ಕೋಳಿ, ಪ್ರಪುಲ್‌ಪಾಟೀಲ, ಮಲ್ಲಪ್ಪ ದೊಡ್ಡನವರ, ರಾಹು ಸಾಹೇಬ, ಬಾಪು ಖೋತ, ಮಹದೇವ ಪಾಟೀಲ ಇತರರು ಇದ್ದರು.