ಪುಣ್ಯ ಕಾರ್ಯಗಳಲ್ಲಿ ಪಾಲ್ಗೊಳ್ಳಲಿ

2MDLG1
Published on

ಮೂಡಲಗಿ: ಯುವ ಸಮುದಾಯ ಆಧ್ಯಾತ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂದು ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಹೇಳಿದರು.

ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ 26ನೇ ಸತ್ಸಂಗ ಮಹೋತ್ಸವ ಮತ್ತು ಸಿದ್ದಲಿಂಗೇಶ್ವರ ಜಾತ್ರಾ ಹಾಗೂ ತುಲಾಭಾರ ಸೇವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶ್ರೀಮಠದ ನಿಜಗುಣ ದೇವರಲ್ಲಿ ಸಹೋದರತ್ವ ಭಾವನೆಯಿದೆ. ಅವರ ಆಶೀರ್ವಾದ ಪಡೆದು ನಾವೆಲ್ಲರೂ ಪುಣ್ಯವಂತರಾಗಬೇಕು. ಯುವಜನತೆ ಪುಣ್ಯ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು. ಶ್ರೀಗಳ ಜತೆಗೆ ಜಾರಕಿಹೊಳಿ ಮನೆತನವು ಸದಾ ಇರುತ್ತದೆ ಎಂದರು.

ಜಮಖಂಡಿ ಶಾಸಕ ಜಗದೀಶ ಗುಡಗಂಟಿ ಮಾತನಾಡಿ, ನಿಜಗುಣ ದೇವ ಸ್ವಾಮೀಜಿ ಅವರು ಸಿದ್ದಲಿಂಗ ಕೈವಲ್ಯಾಶ್ರಮ ನಿರ್ಮಿಸಿ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ತಾಣವನ್ನಾಗಿ ಮಾಡಿದ್ದಾರೆ ಎಂದರು.

ಶ್ರೀಗಳ ಸಾಹಿತ್ಯದಲ್ಲಿ ಗಾಯಕಿ ಲಕ್ಷ್ಮೀದೇವಿ ಕುಳಲಿ ಹಾಡಿರುವ ಬದುಕು ಸಿಡಿ ಹಾಗೂ ನಿಜಗುಣ ದೇವ ಯೂಟ್ಯೂಬ್ ಬಿಡುಗಡೆ ಮಾಡಲಾಯಿತು. ಶ್ರೀಮಠದಿಂದ ದಾನಿಗಳು, ಗಣ್ಯರು, ಪೂಜ್ಯರನ್ನು ಸನ್ಮಾನಿಸಲಾಯಿತು. ಗುರುನಾಥ ಶಾಸೀ ನಿರೂಪಿಸಿದರು. ಮಠದ ನಿಜಗುಣ ದೇವ ಸ್ವಾಮೀಜಿ, ಕೃಪಾನಂದ ಸ್ವಾಮೀಜಿ, ಕೊಟಬಾಗಿ ಪ್ರಭುದೇವ ಸ್ವಾಮೀಜಿ, ಮಾತೋಶ್ರೀ ಅನುಸೂಯಾದೇವಿ, ಮಾತೋಶ್ರೀ ಸಿದ್ದೇಶ್ವರಿ, ಸಿದ್ಧಾನಂದ ಸ್ವಾಮೀಜಿ, ಲಿಂಗನೂರಿನ ಶಿವಪುತ್ರ ಅವಧೂತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net