

ರಾಣೆಬೆನ್ನೂರ: ಭಾರತ ಹಾಗೂ ಪಾಕಿಸ್ತಾನ ನಡುವೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಹಿನ್ನೆಲೆಯಲ್ಲಿ ತಾಲೂಕಿನ ಕುಮಾರಪಟ್ಟಣ ಬಳಿಯಿರುವ ಗ್ರಾಸಿಂ ಇಂಡಸ್ಟ್ರೀಸ್ ಕಾರ್ಖಾನೆಯಲ್ಲಿ ಬುಧವಾರ ಅಣುಕು ಪ್ರದರ್ಶನ ಮಾಕ್ ಡ್ರಿಲ್ ನಡೆಯಿತು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗೃಹ ಇಲಾಖೆ ಆದೇಶ ಹಿನ್ನಲೆ ಅಣುಕು ಪ್ರದರ್ಶನ ನಡೆದಿದ್ದು, ಪಾಕಿಸ್ತಾನ ಸೇರಿದಂತೆ ಶತ್ರು ರಾಷ್ಟ್ರಗಳಿಂದ ಯಾವುದೇ ಸಂದರ್ಭದಲ್ಲಿ ದಾಳಿಯಾದರೆ ಹೇಗೆ ರಕ್ಷಣಾತ್ಮಕ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಕಾರ್ಖಾನೆಗಳಲ್ಲಿ ವಿಷಾನಿಲಗಳಾದ ಗಂಧಕದ ಡೈ ಆಸ್ಕೆ$ಡ್ , ಕ್ಲೋರಿನ್ ಸಂಗ್ರಹಣೆ ಇದ್ದು, ಶತ್ರು ರಾಷ್ಟ್ರಗಳಿಂದ ಬಾಂಬ್ ದಾಳಿಯಾದಾಗ ವಿಷಾನಿಲಗಳಿಂದ ಮತ್ತಷ್ಟು ಜೀವಹಾನಿಗಳಾಗಬಹುದು. ಆಗ ಹೇಗೆ ಸ್ಪಂದಿಸಬೇಕು ಎಂಬ ಅರಿವು ಮೂಡಿಸಲಾಯಿತು.
ಕಾರ್ಖಾನೆ ಬಳಿ ವಿಷಾನಿಲ ಗಾಳಿಯಲ್ಲಿ ಸೇರಿ ವಾತಾವರಣವೇ ಹದಗೆಟ್ಟು ಸಾವು, ನೋವು ಸಂಭವಿಸುವ ಪರಿಸ್ಥಿತಿ ನಿಮಾರ್ಣವಾಗಬಹುದು. ಹೀಗಾಗಿ ತುರ್ತು ಸಂದರ್ಭದಲ್ಲಿ ಯಾವ ರೀತಿ ರಕ್ಷಣಾ ಕಾರ್ಯ, ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂಬ ಬಗ್ಗೆ ಮಾಕ್ ಡ್ರಿಲ್ ಮೂಲಕ ಮಾಹಿತಿ ನೀಡಲಾಯಿತು.
ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ನೇತೃತ್ವ ವಹಿಸಿದ್ದರು.
ಎಸ್ಪಿ ಅಂಶುಕುಮಾರ, ಎಡಿಸಿ ನಾಗರಾಜ, ಎಸಿ ಚನ್ನಪ್ಪ, ರಾಣೆಬೆನ್ನೂರ ಸಿಪಿಐ ಶಂಕರ, ಜಿಲ್ಲೆಯ ಪೊಲೀಸ್ ಅಧಿಕಾರಿಗಳು, ಗ್ರಾಸಿಂ ಕಾರ್ಖಾನೆ ಸಿಬ್ಬಂದಿ, ಕಾಮಿರ್ಕರು, ಅಗ್ನಿ ಶಾಮಕ ದಳ, ಗೃಹ ರಕ್ಷಕ ದಳ, ಎನ್ ಸಿಸಿ ವಿದ್ಯಾಥಿರ್ಗಳು ಮಾಕ್ ಡ್ರಿಲ್ನಲ್ಲಿ ಪಾಲ್ಗೊಂಡಿದ್ದರು.