ಅಕ್ಟೋಬರ್‌ನಲ್ಲಿ ಸಾಮೂಹಿಕ ವಿವಾಹ

6 DVD 03
ದೇವದುರ್ಗ ತಾಲೂಕು ಜಾಲಹಳ್ಳಿ ಶ್ರೀಲಕ್ಷ್ಮಿರಂಗನಾಥ ದೇವಸ್ಥಾನದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಹಿನ್ನೆಲೆಯಲ್ಲಿ ಗೋವಿಂದ ಸೇವಾ ಸಮಿತಿ ಸಭೆ ನಡೆಯಿತು. ಜಿಪಂ ಮಾಜಿ ಸದಸ್ಯ ಬಸವರಾಜ ಪಂಪಾಪತಿ, ತಾಪಂ ಮಾಜಿ ಸದಸ್ಯ ಗೋವಿಂದರಾಜ, ರಾಜಾ ರಾಮಭದ್ರಪ್ಪ ನಾಯಕ, ಸಿದ್ದಪ್ಪ ಗುಮೇದಾರ್, ಬಾಲಯ್ಯ ಯರಕಮಟ್ಟಿ, ಯಂಕಪ್ಪ ಲಿಂಗದಳ್ಳಿ ಇತರರಿದ್ದರು.
Published on

ದೇವದುರ್ಗ: ತಾಲೂಕಿನ ಜಾಲಹಳ್ಳಿ ಪಟ್ಟಣದ ಆರಾಧ್ಯದೈವ ಶ್ರೀಲಕ್ಷ್ಮಿ ರಂಗನಾಥ ದೇವಸ್ಥಾನದಲ್ಲಿ ದಸರಾ ನಿಮಿತ್ತ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜನೆ ಹಿನ್ನೆಲೆಯಲ್ಲಿ ದೇವಸ್ಥಾನ ಆವರಣದಲ್ಲಿ ಗೋವಿಂದ ಸೇವಾ ಸಮಿತಿ ಸಭೆ ಶನಿವಾರ ನಡೆಯಿತು.

ಸಮಿತಿ ಅಧ್ಯಕ್ಷ ಚಂದ್ರಕಾಂತ ಚಿಕ್ಕಲ್ ಮಾತನಾಡಿ, ಪ್ರತಿವರ್ಷ ದಸರಾ ಸಂದರ್ಭದಲ್ಲಿ ಗೋವಿಂದ ಸೇವಾ ಸಮಿತಿ ನೇತೃತ್ವದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿ ಬಡವರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ. ಈ ವರ್ಷ ಕೂಡ ಅಚ್ಚುಕಟ್ಟಾಗಿ ಸಾಮೂಹಿಕ ಮದುವೆ ಕಾರ್ಯಕ್ರಮ ಮಾಡಬೇಕು.

ನವರಾತ್ರಿ ಹಬ್ಬ ಮುಗಿದ ಮೇಲೆ ಅಕ್ಟೋಬರ್‌ನಲ್ಲಿ ಮದುವೆ ಕಾರ್ಯಕ್ರಮ ಮಾಡಲು ಸೂಕ್ತ ಸಮಯವಾಗಿದೆ. ಸಾಮೂಹಿಕ ವಿವಾಹ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಿಸಲು ಆಹಾರ ಸಮಿತಿ, ಪ್ರಚಾರ ಸಮಿತಿ, ಸ್ಟೇಜ್ ತಯಾರಿ ಸಮಿತಿ ಸೇರಿ ಇತರ ಸಮಿತಿ ರಚಿಸಿ ಮದುವೆಯ ಕೆಲಸದಲ್ಲಿ ತೊಡಗಬೇಕು. ಸ್ವಚ್ಛತೆ, ಕುಡಿವ ನೀರು, ಊಟದ ವ್ಯವಸ್ಥೆ ಉತ್ತಮವಾಗಿ ನಿರ್ವಹಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ಸಮಿತಿ ಕಾರ್ಯದರ್ಶಿ ಮುದುರಂಗಪ್ಪ ಕ್ಯಾದಿಗೇರಾ, ಪ್ರಮುಖರಾದ ವೆಂಕೋಬ ಪೂಜಾರಿ, ಬಸವರಾಜ ಬಂಡಿ, ತಿಮ್ಮಯ್ಯ ಬುಂಕಲದೊಡ್ಡಿ, ಗಂಗಪ್ಪ ತೆಗ್ಗೆಳ್ಳಿ, ಯಾಸೀನ್ ಸಾಬ್ ಮುಲ್ಲಾ, ಶಿವಪ್ಪ ತ್ಯಾಪ್ಲಿ, ಮೌನೇಶ ದೇಸಾಯಿ, ದುರುಗಪ್ಪ ಹೊರಹಟ್ಟಿ, ಸುರೇಶ ಪೂಜಾರಿ, ಗಂಗಧರ ಪೂಜಾರಿ, ತಿಮ್ಮಣ್ಣ ನಾಯಕ ದಿವಾನ, ಚನ್ನಪ್ಪ ಆಂದೇಲಿ, ರಮೇಶ ತೆಗ್ಗೆಳ್ಳಿ, ರಂಗನಾಥ ಕುದುರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net