

ನಿಪ್ಪಾಣಿ: ಪಟ್ಟಣದ ವಿದ್ಯಾ ಸಂವರ್ಧಕ ಮಂಡಳದ ಆವರಣದಲ್ಲಿ ಸ್ಥಳೀಯ ವೀರಶೈವ ಸಮುದಾಯದ ಆಶ್ರಯದಲ್ಲಿ ಶನಿವಾರ ಸೀಮೋಲ್ಲಂಘನ ಜರುಗಿತು.
ಗಣಪತಿ ಸಾಂಗಾವಿಮಠ ನೇತೃತ್ವದಲ್ಲಿ ಬನ್ನಿ ಎಲೆಗಳಿಗೆ ಗಣೇಶ ಕೋಠಿವಾಲೆ ಪೂಜೆ ಸಲ್ಲಿಸಿದರು. ವಿದ್ಯಾ ಸಂವರ್ಧಕ ಮಂಡಳದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ, ಸಂಚಾಲಕ ಸಂಜಯ ಮೊಳವಾಡೆ, ಗಣೇಶ ಖಡೇದ, ಸುರೇಶ ಕೋಠಿವಾಲೆ, ರುದ್ರಕುಮಾರ ಕೋಠಿವಾಲೆ, ಹಾಲಶುಗರ್ ಸಂಚಾಲಕ ಮಹಾಲಿಂಗ ಕೋಠಿವಾಲೆ, ನಗರಸಭೆ ಮಾಜಿ ಉಪಾಧ್ಯಕ್ಷ ಸುನಿಲ ಪಾಟೀಲ, ಸಮುದಾಯದ ಅಧ್ಯಕ್ಷ ವಜ್ರಕಾಂತ ಸದಲಗೆ, ಕಾರ್ಯದರ್ಶಿ ದೀಪಕ ಪಾಟೀಲ, ಪುಷ್ಕರ ತಾರಳೆ, ಅನಿಲ ನೇಷ್ಠಿ, ರವೀಂದ್ರ ಕೋಠಿವಾಲೆ, ಸುನಿಲ ನೇಜೆ, ಮಲ್ಲಿಕಾರ್ಜುನ ಗಡಕರಿ, ಪ್ರವೀಣ ತಾರಳೆ, ವೀರಣ್ಣ ಗಿರಿಮಲ್ಲನ್ನವರ, ಸಂತೋಷ ಕೋಠಿವಾಲೆ, ಮಲ್ಲಿಕಾರ್ಜುನ ಕೋಳಕಿ, ಬಾಬುರಾಜ ಅಲತಗಿ ಇದ್ದರು.