ನಯಾನಗರದಲ್ಲಿ ಸಂಭ್ರಮದ ಶ್ರೀ ಬಸವೇಶ್ವರ ರಥೋತ್ಸವ

23blh3 rathotsav nayanagar-Web
ನಯಾನಗರ ಗ್ರಾಮದಲ್ಲಿ ಬಸವೇಶ್ವರ ರಥೋತ್ಸವ ಸಂಭ್ರಮದಿಂದ ಜರುಗಿತು.
Published on

ಬೈಲಹೊಂಗಲ: ಸಮೀಪದ ನಯಾನಗರ ಗ್ರಾಮದ ಇತಿಹಾಸ ಪ್ರಸಿದ್ಧ ಬಸವೇಶ್ವರ ರಥೋತ್ಸವ ಸಂಭ್ರಮದಿಂದ ಜರುಗಿತು.
ರಥವು ರುದ್ರಾಕ್ಷಿಯ ಮಾಲೆ, ವಿವಿಧ ಬಗೆಯ ಹೂವಿನ ಮಾಲೆಗಳಿಂದ ಕಂಗೊಳಿಸಿತು. ಭಕ್ತರು ರಥಕ್ಕೆ ಹೂವು, ಹಣ್ಣು, ನೈವೇದ್ಯ, ಖಾರಿಕ ಅರ್ಪಿಸಿ ಭಕ್ತಿಭಾವ ಮೆರೆದರು. ರಥವು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿತು. ಅಭಿನವ ಸಿದ್ಧಲಿಂಗ ಸ್ವಾಮೀಜಿ ಉತ್ಸವಕ್ಕೆ ಚಾಲನೆ ನೀಡಿದರು. ಶಾಸಕ ಮಹಾಂತೇಶ ಕೌಜಲಗಿ, ಜಿಪಂ ಸದಸ್ಯ ಅನಿಲ ಮೇಕಲಮರ್ಡಿ, ಬಸವರಾಜ ಕೌಜಲಗಿ, ಗ್ರಾಪಂ ಅಧ್ಯಕ್ಷ ಪರ್ವತಗೌಡ ಪಾಟೀಲ, ರಾಮನಗೌಡ ಪಾಟೀಲ, ಅಶೋಕ ಭದ್ರಶಟ್ಟಿ, ದೇಮನಗೌಡ ಶೀಲವಂತರ, ಶ್ರೀರಂಗರಾವ ನಲವಡೆ, ನಾರಾಯಣ ಶಿರೋಮನಿ, ಮಹಾಬಳೇಶ್ವರ ಮರೆಕ್ಕನವರ ಇತರರು ಇದ್ದರು. ಜಾತ್ರೆ ನಿಮಿತ್ತ ಟಗರಿನ ಕಾಳಗ, ಸ್ಲೋ ಬೈಕ್ ರೇಸ್, ರಂಗೋಲಿ ಸ್ಪರ್ಧೆ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net