

ನವಲಗುಂದ: ತಾಲೂಕಿನಲ್ಲಿ ಮಳೆ ಕೊರತೆಯಿಂದ ಬಿತ್ತನ ಮಾಡಿದ ಬೆಳೆಗಳು ಬಾಡುತ್ತಿದ್ದು ಕೃಷಿಕರು ದಿಕ್ಕು ತೋಚದಂತಾಗಿದ್ದಾರೆ.
ತಾಲೂಕಿನಲ್ಲಿ ಗೋವಿನ ಜೋ ಳ 18,350 ಹೆ ಕ್ಟೇರ್, ಹತ್ತಿ 8040 ಹೆಕ್ಟೇರ್, ಶೇಂಗಾ 10 ಹೆಕ್ಟೇರ್, ಉದ್ದು 70 ಹೆಕ್ಟೇರ ಪ್ರದೇಶದಲ್ಲಿ ಬಿತ್ತನೆ ಯಾಗಿದೆ.
ತೋಟಗಾರಿಕೆ ಬೆಳೆಗಳಾದ ಈರುಳ್ಳಿ 1193 ಹೆಕ್ಟೇರ್, ಮೆಣಿಸಿನಕಾಯಿ 1258 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಯಾಗಿದೆ.
ಆಗಸ್ಟ್ ತಿಂಗಳಿನಲ್ಲಿ ಸರಾಸರಿ 69.9 ಮಿ.ಮೀ. ಮಳೆ ಬಿಳಬೇಕಿತ್ತು . ಆದರೆ ಸರಾಸರಿ 54.1ಮಿಮೀ ಮಾತ್ರ ಮಳೆಯಾಗಿದೆ.
ಈಗಾಗಲೇ ಕ್ಷೇತ್ರ ಮಟ್ಟ ದ ಬೆಳೆ ಸಮಿಕ್ಷೆ ಆರಂಭಗೊಂಡಿದ್ದು ಶೇ . 50ರಷ್ಟು ಮುಕ್ತಾಯವಾಗಿದೆ ಅದರಲ್ಲಿ ಶೇ. 60ರಷ್ಟು ಬೆಳೆ ನಷ್ಟ ವಾಗಿದೆ ಎಂದು ಅಂದಾಜಿಸಲಾಗಿದೆ. | ಶ್ರೀನಾಥ ಚಿಮ್ಮಲಗಿ ಸಹಾಯಕ ಕೃಷಿ ನಿರ್ದೇಶಕ ನವಲಗುಂದ
ಬಿತ್ತನೆ ಮಾಡಿದ ಬೆಳೆಗಳು ಮಳೆ ಇಲ್ಲದ ಕಾರಣ ಬಾಡುತ್ತಿವೆ. ತಾಲೂಕಿನ ಯಾವ ಕ್ಷೇತ್ರದಲ್ಲೂ ಕುಡಿಯುವ ನೀರಿನ ಕೊರತೆ ಇಲ್ಲ. ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಲು ಸಿದ್ಧತೆ ನಡೆಲಾಗಿದೆ. ನೈಸರ್ಗಿಕ ವಿಪತ್ತು ಪರಿಹಾರ ನಿಧಿ 42 ಲಕ್ಷ ರೂ. ಇದೆ. | ಸುಧೀರ ಸಾಹುಕಾರ ತಹಸೀಲ್ದಾರ್ ನವಲಗುಂದ
ಹೆಸರು ಬಿತ್ತಿದ್ದು ಎಲ್ಲಾ ಹಾಳಾತು. ಮತ್ತೊಮ್ಮೆ ಭೂತಾಯಿ ಮೇಲೆ ನಂಬಿಕೆ ಇಟ್ಟು ಮೆಣಿಸಿಕಾಯಿ, ಗೊ ವಿನಜೋಳ ಬಿತ್ತಿದ್ದೇನೆ. ಗೋವಿನ ಜೋಳಕ್ಕೆ ಲದ್ದಿ ಹುಳುವಿನ ಕಾಟ ಆರಂಭವಾಗಿದೆ. ಮೆಣಸಿಕಾಯಿ ಗಿಡ ಮಳೆ ಇಲ್ಲದೇ ಬಾಡುತ್ತಿದೆ. | ಸಿದ್ದಲಿಂಗಪ್ಪ ಹಳ್ಳ ದ, ರೈತ