40ಲಕ್ಷ ರೂ.‌ಮೌಲ್ಯದ ಚಿನ್ನ, ಬೆಳ್ಳಿ ವಶಕ್ಕೆ

IMG-20230404-WA0043.jpg
Published on



ಬೆಳಗಾವಿ:ಖಾನಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ದಾಖಲೆಗಳಿಲ್ಲದೆ 40ಲಕ್ಷ ರೂ.ಚಿನ್ನ, ಬೆಳ್ಳಿ ಸಾಗಾಟ ಮಾಡುತ್ತಿದ್ದ ವಾಹನದ ಮೇಲೆ ನಂದಗಡ ಠಾಣೆ ಪೊಲೀಸರು ದಾಳಿ ನಡೆಸಿ ಜಪ್ತಿ ಮಾಡಿಕೊಂಡಿದ್ದಾರೆ.
ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಯಾವುದೇ ದಾಖಲೆಗಳು ಇಲ್ಲದೆ ಖಾನಾಪುರ ಮಾರ್ಗವಾಗಿ ಹಳಿಯಾಳದಿಂದ ಕಕ್ಕೇರಿಗೆ ಸಾಗಿಸುತ್ತಿರುವ ಸಂದರ್ಭದಲ್ಲಿ ಮಂಗಳವಾರ ಪೊಲೀಸರು ದಾಳಿ ನಡೆಸಿದ್ದಾರೆ.
ಕಾರಿನಲ್ಲಿ21.25ಲಕ್ಷ ರೂ. ಮೌಲ್ಯದ 395.7 ಗ್ರಾಂ ಚಿನ್ನ, 19.08ಲಕ್ಷ‌ಮೌಲ್ಯದ  28.65ಕೆಜಿ ಬೆಳ್ಳಿ ಹಾಗೂ 5 ಲಕ್ಷ ರೂ.‌ಮೌಲ್ಯದ ಕಾರು ಸೇರಿದಂತೆ ಒಟ್ಟು 53,33,725 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net