ನಾಗೇನಹಳ್ಳಿಯಲ್ಲಿ ವಾಂತಿ-ಭೇದಿ ಹತೋಟಿಗೆ

Sandru Faging
ನಾಗೇನಹಳ್ಳಿ ಗ್ರಾಮದಲ್ಲಿ ಗ್ರಾಪಂ ಕಾರ್ಮಿಕರು ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಿದರು.
Published on

ಸಂಡೂರು: ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ವಾಂತಿ-ಭೇದಿ ಪ್ರಕರಣಗಳು ನಿಯಂತ್ರಣಕ್ಕೆ ಬಂದಿವೆ. ಆದರೂ ಮುಂಜಾಗ್ರತಾ ಕ್ರಮವಾಗಿ ತಾತ್ಕಾಲಿಕ ಆರೋಗ್ಯ ಕೇಂದ್ರ ಮುಂದುವರಿಸಲಾಗಿದೆ.

ಪ್ರಭಾರ ಟಿಎಚ್‌ಒ ಭರತ್ ಕುಮಾರ್, ತೋರಣಗಲ್ ವೈದ್ಯ ಅಕ್ಷಯ್ ಪರೀಕ್ಷೆ ಮಾಡುತ್ತಿದ್ದಾರೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸರ್ವೇ ಕಾರ್ಯ ಮಾಡುತ್ತಿದ್ದಾರೆ.

ಪ್ರಭಾರ ಟಿಎಚ್‌ಒ ಭರತ್ ಕುಮಾರ್ ಮಾತನಾಡಿ, ಗ್ರಾಪಂಯಿಂದ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್, ನೀರು ನಿಂತ ಕಡೆ ಬ್ಲೀಚಿಂಗ್ ಪೌಡರ್ ಹಾಕಲಾಗಿದೆ. ಆದರೆ, ಇನ್ನೂ ಪೈಪ್‌ಲೈನ್ ಸರಿಮಾಡಿಲ್ಲ ಎಂದವರು, ವಾಂತಿ-ಭೇದಿ ಆದವರು ಒಂದು ಲೀಟರ್ ನೀರಿಗೆ ಇಲಾಖೆ ನೀಡುವ ಒಆರ್‌ಎಸ್ ಬೆರೆಸಿ ಕುಡಿಯಬೇಕು. ಅಲ್ಲದೆ ಪ್ರತಿಯೊಬ್ಬರೂ ಕುದಿಸಿ ಆರಿಸಿ ಸೋಸಿದ ನೀರನ್ನು ಕುಡಿಯಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net