ಕಂಪ್ಲಿ: ತಾಲೂಕಿನ ಮಾವಿನಹಳ್ಳಿ ಗ್ರಾಮದ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ ಕಲಾವಿದರು ವಿಶ್ವ ವಿಖ್ಯಾತ ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಯಲಾಟ ಪ್ರದರ್ಶಿಸಲಿದ್ದಾರೆ.
ಮೈಸೂರಿನ ರಮಾ ಗೋವಿಂದ ರಂಗಮಂದಿರ ವೇದಿಕೆಯಲ್ಲಿ ಅ.7ರಂದು ವೀರ ಅಭಿಮನ್ಯು ಕಾಳಗ ಬಯಲಾಟ ಪ್ರದರ್ಶನಗೊಳ್ಳಲಿದೆ.
ಮೇಷ್ಟ್ರು ವೆಂಕಟೇಶರಿಂದ ಹಾರ‌್ಮೋನಿಯಂ, ಬಾಲಕೃಷ್ಣನ ಪಾತ್ರದಲ್ಲಿ ಬಿ.ಕೆ.ತಿಮ್ಮರಾಜ, ಶ್ರೀ ಕೃಷ್ಣನಾಗಿ ಬಿ.ಕೆ.ಸಿದ್ದಪ್ಪ ಧರ್ಮಪ್ಪ, ಅರ್ಜುನನಾಗಿ ಕೊಳ್ಳಿ ವೀರೇಶ, ಸಾರಥಿಯಾಗಿ ಕುರುಬರ ಹೇಮೇಶ್ವರ ಇತರ ಕಲಾವಿದರು ಅಭಿನಯಿಸಲಿದ್ದಾರೆ.