

ಮುರಗೋಡ: ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಮುರಗೋಡ ಗ್ರಾಮದ ಪ್ರತಿ ದೇವಸ್ಥಾನದ ಆವರಣದಲ್ಲಿ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಹನುಮ ಮಂದಿರ, ಮಲ್ಲಿಕಾರ್ಜುನ ದೇವಸ್ಥಾನ, ಮಹಾಂತ ದುರದುಂಡೇಶ್ವರ ಮಠ, ಚಿದಂಬರೇಶ್ವರ ಮಠ, ಮಹಾ ಗಣಪತಿ ದೇವಸ್ಥಾನ ಸಿಂಗರಿಸಲಾಗಿತ್ತು. ಸಿಹಿ ಹಂಚಲಾಯಿತು. ರಾತ್ರಿ ಭಜನೆ, ರಾಮ ಕಥನ, ಪಾರಾಯಾಣ, ಹೋಮ ನೆರವೇರಿದವು.
ಶ್ರೀರಾಮ, ಹನುಮ ದೇವರ ಮೂರ್ತಿ ಪಲ್ಲಕ್ಕಿಯಲ್ಲಿಟ್ಟು ವಾದ್ಯಮೇಳದೊಂದಿಗೆ ಮೆರವಣಿಗೆ ಮಾಡಲಾಯಿತು. ಪಂಡಿತ ಕೋಮಲ ಕಡ್ಲಾಸ್ಕರ, ಶಿವಪ್ರಸಾದ ಹುಲ್ಲೆಪ್ಪನವರಮಠ, ಪುಂಡಲೀಕ ಅಮಠೆ, ಮಂಜು ಆಡಿನ, ರವಿ ಹಂಪಿಹೊಳಿ, ಡಾ.ಆರ್.ಎಸ್.ಬಾಳಿಕಾಯಿ, ಶಂಕರ ದಳವಾಯಿ, ಸಂತೋಷ ಹೆಗ್ಗಣ್ಣವರ, ಮಹಾಂತೇಶ ಬಾಳಿಕಾಯಿ ಇತರರಿದ್ದರು.